ಉತ್ತರಕನ್ನಡ : ಜಿಲ್ಲೆಯ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಕೊನೆಗೂ ಪತ್ತೆಯಾಗಿದೆ.
ಹೌದು ಮುಳುಗು ತಜ್ಞ ಈಶ್ವರ ಮಲ್ಪೆ ತಂಡದಿಂದ ಲಾರಿಯನ್ನು ಮೇಲೆತ್ತಲಾಗುತ್ತಿದ್ದು ಲಾರಿಗೆ ಹಗ್ಗ ಕಟ್ಟಿ ಮೇಲೆ ಎಳೆಯಲು ರಕ್ಷಣಾ ಸಿಬ್ಬಂದಿ ಇದೀಗ ಸಿದ್ಧತೆ ಮಾಡಿಕೊಂಡಿದ್ದಾರೆ.
ಆದಷ್ಟು ಬೇಗ ಲಾರಿಯನ್ನು ಮೇಲೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಎಲ್ಲಾ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಅಲ್ಲದೆ ಘಟನೆ ಬಳಿಕ ರಾಡಾರ್ ಮೂಲಕ ಶೋಧ ಕಾರ್ಯ ನಡೆಸಿ ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್ ಗಳು ಇರುವುದು ಪತ್ತೆಯಾಗಿತ್ತು. ರಸ್ತೆಯ ಬದಿ ಇದ್ದ ಅಂಗಡಿ ನೆಲಸಮವಾದ ಕಡೆ ಶೋಧ ಕಾರ್ಯ ನಡೆಸಲಾಗಿದ್ದು, ಗಂಗಾವಳಿ ನದಿಗೆ ಬಿದ್ದ ಮಣ್ಣಿನ ಗುಡ್ಡದಲ್ಲಿ NDRF ,SDRF ,ಆರ್ಮಿ ಕಮಾಂಡೋಗಳ ತಂಡ ಶೋಧ ಕಾರ್ಯ ಮಾಡಿತ್ತು.
ಸಂತ್ರಸ್ತರಿಗೆ ಮೋದಿ ಪರಿಹಾರ
ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮೇರೆಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ದುರಂತದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿತ್ತು.