Home ಕರಾವಳಿ ಮಂಗಳೂರು: Whatsapp ಸಂದೇಶ ನಂಬಿ 1 ಕೋಟಿ ರೂ. ಕಳೆದುಕೊಂಡ ವ್ಯಕ್ತಿ..! ಪ್ರಕರಣ ದಾಖಲು

ಮಂಗಳೂರು: Whatsapp ಸಂದೇಶ ನಂಬಿ 1 ಕೋಟಿ ರೂ. ಕಳೆದುಕೊಂಡ ವ್ಯಕ್ತಿ..! ಪ್ರಕರಣ ದಾಖಲು

0

ಮಂಗಳೂರು:  ವಾಟ್ಸ್‌ಆ್ಯಪ್ ಮೂಲಕ ಬಂದ ಸಂದೇಶ ನಂಬಿ ಹೋದ ವ್ಯಕ್ತಿಯೋರ್ವ ಬರೋಬ್ಬರಿ 1 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ ಬಗ್ಗೆ  ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆ.16ರಂದು ತನಗೆ ವಾಟ್ಸ್‌ಆ್ಯಪ್ ಮೂಲಕ ಬಂದ ಸಂದೇಶದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ತಾನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಂಡೆ. ನಂತರ ಗ್ರೂಪ್ ಅಡ್ಮಿನ್ ಕಳುಹಿಸಿದ ಲಿಂಕ್ ಒತ್ತಿ ಅದಕ್ಕೂ ಜಾಯಿನ್ ಆದೆ. ಸೆಪ್ಟಂಬರ್ 1ರಿಂದ ಹಣ ಪಾವತಿಸುತ್ತಾ ಬಂದಿರುವೆ. ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಹಾಗೇ ತನ್ನ ಮನೆಯವರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ತಿಳಿಯಿತು. ಒಟ್ಟಿನಲ್ಲಿ ಸೆ.1ರಿಂದ ಅಕ್ಟೋಬರ್ 7ರವರೆಗೆ ಅಪರಿಚಿತರು ನಕಲಿ ಟ್ರೇಡಿಂಗ್ ಹೆಸರಿನಲ್ಲಿ ತನ್ನಿಂದ 1,25,67,726 ರೂ. ವನ್ನು ಆನ್‌ಲೈನ್ ಮೂಲಕ ಮೋಸ ಮಾಡಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದು ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here