Home ಕರಾವಳಿ ಹಿಂದೂ ಎಕನಾಮಿಕ್ ಫೋರಂ ಮಂಗಳೂರು ಚಾಪ್ಟರ್ ನ ಎರಡನೇ ವರ್ಷದ ಸಂಭ್ರಮಾಚರಣೆ

ಹಿಂದೂ ಎಕನಾಮಿಕ್ ಫೋರಂ ಮಂಗಳೂರು ಚಾಪ್ಟರ್ ನ ಎರಡನೇ ವರ್ಷದ ಸಂಭ್ರಮಾಚರಣೆ

0

ಮಂಗಳೂರು: ಹಿಂದೂ ಎಕನಾಮಿಕ್ ಫೋರಂ ಮಂಗಳೂರು ಚಾಪ್ಟರ್ ನ ಎರಡನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮ ಇಂದು ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.


“ಹಿಂದೂ ಎಕನಾಮಿಕ್ ಫೋರಂ” ಮಂಗಳೂರು ಚಾಪ್ಟರ್ 2022 ರಲ್ಲಿ ಮಂಗಳೂರಿನಲ್ಲಿ ಪ್ರಾರಂಭವಾಗಿದ್ದು ಇಂದಿನ ವಾರ್ಷಿಕೋತ್ಸವದ ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ (WHEF) ಸ್ಥಾಪಕರಾದ ಶ್ರೀ ಸ್ವಾಮಿ ವಿಗ್ಯಾನಾನಂದಜಿ ಅವರು ನೆರವೇರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ HEF ಮಂಗಳೂರು ಚಾಪ್ಟರ್ ನ ಅಧ್ಯಕ್ಷರಾದ ಶ್ರೀ ನಿಶಾಂತ್ ಶೇಟ್ ರವರು ಪ್ರಾಸ್ತಾವಿಕ ಭಾಷಣ ಮಾಡಿ HEF ಮಂಗಳೂರು ಚಾಪ್ಟರ್ ನ ಈಗ ನಡೆದಿರುವ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ HEF ನ ಭಾಗವಾಗಿ ಮಂಗಳೂರಿನಲ್ಲಿ ಕಾರ್ಯಾಚರಣೆಗೊಳ್ಳಲಿರುವ “ಅಶ್ವಮೇಧ ಕೋ ಆಪರೇಟಿವ್ ಸೊಸೈಟಿ” ಇದರ ಉದ್ಘಾಟನೆಯನ್ನು ಕೂಡ ಇಂದು ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ ದಿವ್ಯ ಹಸ್ತದಿಂದ ಜರುಗಿಸಲಾಯಿತು. ಸೊಸೈಟಿಯ ಮೊದಲ ಸದಸ್ಯತ್ವವನ್ನು ಶ್ರೀ ನಿಶಾಂತ್ ಶೇಟ್ ರವರು ಹಾಗೂ ಹೊಸದಿಗಂತ ಸಿ ಇ ಓ ಆದ ಶ್ರೀ ಪ್ರಕಾಶ್ ಪಿ ಎಸ್ ರವರು ಪಡೆದರು.

ಕಾರ್ಯಕ್ರಮದಲ್ಲಿ HEF ಇದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಪತ್ರಕರ್ತರು ಹಾಗೂ ಭಾರತ್ ಒನ್ ಗ್ರೂಪ್ ನ ಎಂಡಿ ಶ್ರೀ ಶಿವಪ್ರಸಾದ್ ಟಿ ಆರ್ ಇವರು ಕರ್ನಾಟಕದಾದ್ಯಂತ ಹಿಂದೂ ಎಕನಾಮಿಕ್ ಫೋರಮ್ ಈವರೆಗೂ ನಡೆಸಿರುವ ಯೋಜನೆಗಳು ಹಾಗೂ ಮುಂಬರುವ ಎಲ್ಲಾ ದೊಡ್ಡ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಶ್ರೀ ಸ್ವಾಮಿ ವಿಗ್ಯಾನಾನಂದಜಿ ರವರು ಮಾತನಾಡಿ ಹಿಂದೂ ಎಕನಾಮಿಕ್ ಫೋರಂ ಹಿಂದೂ ಸಮಾಜಕ್ಕೆ ಏತಕ್ಕಾಗಿ ಬೇಕು ಹಾಗೂ ಹಿಂದುಗಳು ಆರ್ಥಿಕವಾಗಿ ದೃಢವಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಹಾಗೂ ಹಿಂದುಗಳು ದೇಶದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಹೊಸದಿಗಂತದ ಸಿ ಇ ಓ ಆಗಿರುವ ಶ್ರೀ ಪ್ರಕಾಶ್ ಪಿ ಎಸ್, ಇ-ಸಮುದಾಯ ಇದರ ಸ್ಥಾಪಕರಾದ ಶ್ರೀ ಪ್ರಮೋದ್ ಪೈ ಹಾಗೂ HEF ಮಂಗಳೂರು ಚಾಪ್ಟರ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗಣೇಶ್ ರವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here