Home ತಾಜಾ ಸುದ್ದಿ ಇಂದಿನಿಂದ ಯುದ್ಧಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಇಂದಿನಿಂದ ಯುದ್ಧಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

0

ನವದೆಹಲಿ: ಇಂದಿನಿಂದ (ಆ.21ರಿಂದ) ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. ಮೊದಲಿಗೆ ಪೋಲೆಂಡ್‌ಗೆ ತೆರಳಲಿರುವ ಮೋದಿ, ಅಲ್ಲಿಂದ ಉಕ್ರೇನ್‌ಗೆ ತೆರಳಲು ಮತ್ತು ಉಕ್ರೇನ್‌ನಿಂದ ಪೋಲೆಂಡ್ ಮರಳಲು ವಿಶೇಷ ರೈಲು ಬಳಸಲಿದ್ದಾರೆ. ಇಂದಿನಿಂದ (ಆ.21ರಿಂದ) ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. ಮೊದಲಿಗೆ ಪೋಲೆಂಡ್‌ಗೆ ತೆರಳಲಿರುವ ಮೋದಿ, ಅಲ್ಲಿಂದ ಉಕ್ರೇನ್‌ಗೆ ತೆರಳಲು ಮತ್ತು ಉಕ್ರೇನ್‌ನಿಂದ ಪೋಲೆಂಡ್ ಮರಳಲು ವಿಶೇಷ ರೈಲು ಬಳಸಲಿದ್ದಾರೆ. ಇನ್ನು 1991ರಲ್ಲಿ ಉಕ್ರೇನ್‌ ಸ್ವತಂತ್ರ ದೇಶವಾಗಿ ಹೊರಹೊಮ್ಮಿದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಲಿದ್ದಾರೆ. ಎರಡೂ ದೇಶಗಳ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಪ್ರಯತ್ನಿಸಲಿದ್ದಾರೆ.

LEAVE A REPLY

Please enter your comment!
Please enter your name here