Home ಪ್ರಖರ ವಿಶೇಷ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದ ಶಿಕ್ಷಕ- ಶಿಕ್ಷಕಿಗೆ...

ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದ ಶಿಕ್ಷಕ- ಶಿಕ್ಷಕಿಗೆ ಇಲಾಖೆಯಿಂದ ನೋಟಿಸ್

0
A notice from the department to the teacher who posted a status on social media criticizing the government's guarantee schemes.


ಗಂಗಾವತಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸ್ಟೇಟಸ್ ಹಾಕಿದ್ದ ಗಂಗಾವತಿ ನಗರದ ಇಂದಿರಾನಗರ ಶಾಲೆಯ ಶಿಕ್ಷಕಿ ನಳಿನಾಕ್ಷಿ ಮತ್ತು ಅಮರ ಭಗತ್ ಸಿಂಗ್ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಪತ್ರೆಪ್ಪ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಕುರಿತು ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಳಿನಾಕ್ಷಿ ಹಾಗೂ ಅಮರ್ ಭಗತ್ ಸಿಂಗ್ ನಗರದ ಮುಖ್ಯ ಶಿಕ್ಷಕ ಪತ್ರೆಪ್ಪ ಇವರು ಆಕ್ಷೇಪ ವ್ಯಕ್ತಪಡಿಸಿ ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ನ್ನು ಹಾಕಿಸಿ ಗ್ಯಾರಂಟಿ ಹಠವು ದೇಶ ಬಚಾವ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕಾಗಿ ಮಾಡಿದ ಕೆಲಸ ಕಾರ್ಯಗಳನ್ನು ಯಾರು ಪ್ರಶ್ನಿಸುತ್ತಾರೋ ಅವರನ್ನು ಕುಳ್ಳಿರಿಸಿಕೊಂಡು ಮಾಹಿತಿ ನೀಡುವಂತೆ ೨೦೦
ಯೋಜನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬಿಜೆಪಿ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು.
ಶಿಕ್ಷಕ ಶಿಕ್ಷಕಿ ಸಾಮಾಜಿಕ ಜಾಲತಾಣದ ಹಾಕಿರುವ ಸ್ಟೇಟಸ್ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದ್ದವು.
ಈ ಕುರಿತು ಕಲ್ಯಾಣಸರಿ ವೆಬ್ ನ್ಯೂಸ್ ನಲ್ಲಿ ಸಹ ವಿವರವಾಗಿ ವರದಿ ಮಾಡಲಾಗಿತ್ತು .



ಇದನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಡಿಡಿಪಿಐ ಕೊಪ್ಪಳ ಇವರು ಮುಖ್ಯ ನಳಿನಾಕ್ಷಿ ಹಾಗೂ ಪತ್ರೆಪ್ಪ ಇವರಿಗೆ ಕೆ ಸಿ ಎಸ್ ಆರ್ ನಿಯಮ ಉಲ್ಲಂಘಿಸಿದ ಕುರಿತು ನಿಮಗೆ ಯಾಕೆ ನೋಟಿಸ್ ನೀಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕೂಡಲೇ ನೋಟಿಸ್ ಗೆ ಉತ್ತರ ಕೊಡಬೇಕು ಇಲ್ಲದಿದ್ದರೆ ಏಕಮುಖವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ನೊಟೀಸ್ ನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here