ಉಳ್ಳಾಲ: ನಿರಂತರ ಸುರಿಯುತ್ತಿರುವ ಮಳೆಯಿಂದ ಉಳ್ಳಾಲದ ಮೇಲಂಗಡಿಯ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದ್ದು ಮನೆಯೊಳಗಿದ್ದ ಇಬ್ಬರು ಗಾಯಗೊಂಡಿದ್ದಾರೆ. ಉಳಿದವರು ಮನೆಯ ಹಾಲ್ ಸೀಲಿಂಗ್‌ನಿಂದ ರಕ್ಷಣೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲಂಗಡಿ ನಿವಾಸಿ ಖಲೀಲ್(38) ಮತ್ತು ಖತೀಜತುಲ್ ಕುಬ್ರ(11) ಎಂಬವರು ಗಾಯಗೊಂಡಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖತೀಜಮ್ಮ ಎಂಬವರ ಮನೆಯ ಹಂಚಿನ ಮೇಲ್ಛಾವಣಿ ಕುಸಿದು ಬಿದ್ದಿದೆ. ಘಟನೆ ನಡೆದ ಸಂದರ್ಭ ಖತೀಜಮ್ಮ ಮತ್ತು ಕಿರಿಯ ಪುತ್ರ ನಗರಸಭೆಯ ಮಾಜಿ ಉದ್ಯೋಗಿ ಅಬ್ಬಾಸ್ ಮನೆಯ ಹಾಲ್‌ನಲ್ಲಿದ್ದ ಪರಿಣಾಮ ಫೈವುಡ್ ಸೀಲಿಂಗ್‌ನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.