Home ತಾಜಾ ಸುದ್ದಿ ವಯನಾಡು ಭೂಕುಸಿತದಲ್ಲಿ ಇದುವರೆಗೆ 330 ಮಂದಿ ಬಲಿ..!

ವಯನಾಡು ಭೂಕುಸಿತದಲ್ಲಿ ಇದುವರೆಗೆ 330 ಮಂದಿ ಬಲಿ..!

0

ಕೇರಳ : ವಯನಾಡು ಭೂಕುಸಿತದಲ್ಲಿ ಇದುವರೆಗೆ 330 ಮಂದಿ ಬಲಿಯಾಗಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ.


ಚೂರಲ್ಮಾಲಾ ಮತ್ತು ಮುಂಡಕ್ಕೈನಲ್ಲಿ ಭೂಕುಸಿತ ಸಂಭವಿಸಿದ್ದು, ಕೇರಳದಲ್ಲಿ ಶೋಕಾಚರಣೆ ಮಾಡಲಾಗಿದ್ದು, ಸಾವಿನ ಸಂಖ್ಯೆ ಈಗ 330 ದಾಟಿದೆ. 220 ಕ್ಕೂ ಹೆಚ್ಚು ಜನರು ಕಾಣೆಯಾಗಿರುವುದರಿಂದ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಸಂಜೆ 4 ಗಂಟೆಯವರೆಗೆ ಮುಂದುವರಿಯಬೇಕಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಗುರುವಾರ ಮೊಟಕುಗೊಳಿಸಲಾಯಿತು.

ಕೇರಳದಲ್ಲಿ ಭೂಕುಸಿತ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಜಿಲ್ಲಾಡಳಿತ ಮಾಹಿತಿ ನೀಡಿತ್ತು, ಈ ಹಿನ್ನೆಲೆ ಅವರು ನಿನ್ನೆ ಕೇರಳದ ವಯನಾಡಿಗೆ ಧಾವಿಸಿ ಅಲ್ಲಿನ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಅಲ್ಲಿನ ಜನರಿಗೆ 100 ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here