Home ಕರಾವಳಿ ಬಜ್ಪೆ : 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು- ಆರೋಪಿ ಬಂಧನ

ಬಜ್ಪೆ : 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು- ಆರೋಪಿ ಬಂಧನ

0

ಬಜ್ಪೆ ಗ್ರಾಮದ ಕರೋಡಿ ಎಂಬಲ್ಲಿನ ಮನೆಗೆ ಕಳ್ಳರು ಸೆ.1ರಂದು ನುಗ್ಗಿ ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಆರೋಪಿಯನ್ನು ಸೆ.4ರಂದು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಬಜ್ಪೆಯ ತಾರಿಕಂಬಳ ನಿವಾಸಿ ವಿನ್ಸೆಂಟ್ ಡಿಸೋಜಾ (34) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು (ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಹರಳುಗಳಿಂದ ಕೂಡಿರುವ ಚಿನ್ನದ ನೆಕ್ಲೆಸ್‌, ಚಿನ್ನದ ಬಳೆಗಳು-2, ಚಿನ್ನದ ಉಂಗುರಗಳು-3, ಒಂದು ಜೊತೆ ಚಿನ್ನದ ಕಿವಿ ಒಲೆ ಮತ್ತು ಒಂದು ಜತೆ ಚಿನ್ನದ ಜುಮುಕಿ) ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳ ಬಂಧನಕ್ಕೆ ಬಜ್ಪೆ ಪೊಲೀಸ್‌ ನಿರೀಕ್ಷಕ ಪ್ರಕಾಶ್‌, ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಲತಾ, ಪಿಎಸ್‌ಐ ಕುಮರೇಶ, ಪಿಎಸ್‌ಐ ರೇವಣ ಸಿದ್ದಪ್ಪ, ಎಎಸ್‌ಆರ್‌ ರಾಮ ಪೂಜಾರಿ, ರಶೀದಾ ಶೇಖ್‌, ಸುಜನ್‌, ರೋಹಿತಾ, ದುರ್ಗಾಪ್ರಸಾದ್‌ ಶೆಟ್ಟಿ, ಸಂತೋಷ, ಬಸವರಾಜ ಪಾಟೀಲ, ಕೆಂಚನಗೌಡ ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here