Home ಕರಾವಳಿ ಮುಲ್ಕಿ: ಬಳ್ಕುಂಜೆ ಬಳಿ ಮನೆ ಕಳ್ಳತನ ಆರೋಪಿ “ಇತ್ತೆ ಬರ್ಪೆ ಅಬೂಬಕ್ಕರ್” ಬಂಧನ; ಲಕ್ಷಾಂತರ ಮೌಲ್ಯದ...

ಮುಲ್ಕಿ: ಬಳ್ಕುಂಜೆ ಬಳಿ ಮನೆ ಕಳ್ಳತನ ಆರೋಪಿ “ಇತ್ತೆ ಬರ್ಪೆ ಅಬೂಬಕ್ಕರ್” ಬಂಧನ; ಲಕ್ಷಾಂತರ ಮೌಲ್ಯದ ಆಭರಣ ವಶ

0

ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆ ಇಂದಾವರ ಉಪ್ಪಳ್ಳಿ ಮಸೀದಿ ಬಳಿಯ ನಿವಾಸಿ ಅಬೂಬಕರ್ ಯಾನೆ ಆಲಿಯಾಸ್ ಇತ್ತೆ ಬರ್ಪೆ ಅಬೂಬಕ್ಕರ್ (69) ಎಂದು ಗುರುತಿಸಲಾಗಿದೆ.

ಜುಲೈ 3ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆಗ್ರಾಮದ ನೀರಲ್ಕೆ ಎಂಬಲ್ಲಿ ಸ್ಥಳೀಯ ನಿವಾಸಿ ಸಾಗೀರ ಎಂಬವರ ಮನೆಯ ಹಿಂಭಾಗಲಿನ ಚಿಲಕ ಮುರಿದು ಮನೆಯ ಕಪಾಟಿನ ಒಳಗಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೊಲೀಸ್ ಠಾಣಾ ಇನ್ಸೆಕ್ಟರ್ ವಿದ್ಯಾಧರ್‌ ಹಾಗೂ ಎಸ್‌ಐ ವಿನಾಯಕ್‌ ಬಾವಿಕಟ್ಟೆ ತೀವ್ರ ತನಿಖೆ ನಡೆಸಿ ಜುಲೈ 20ರಂದು ಆರೋಪಿ ಅಬೂಬಕ್ಕರ್ ನನ್ನು ದಸ್ತಗಿರಿ ಮಾಡಿದ್ದು ಆರೋಪಿಯಿಂದ ಪ್ರಕರಣದ ಕಳವಿಗೆ ಸಂಬಂಧಿಸಿದ ಕಳವು ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ಜುಪಿಟರ್ ಸ್ಕೂಟರ್ ಮತ್ತು 6.250 ಗ್ರಾಂ ತೂಕ ಚಿನ್ನದ ಬ್ರಾಸ್ಲೇಟ್ 1.1.160 0 ತೂಕ ಚಿನ್ನದ ಉಂಗುರ -11.190 ಗ್ರಾಂ ತೂಕ ಚಿನ್ನದ ಉಂಗುರ 2,1.220 ಗ್ರಾಂ ತೂಕದ ಚಿನ್ನದ ಉಂಗುರ-1, 2.840 ತೂಕದ ಮುತ್ತಿನ ಸರ -1, 2.150 ತೂಕ ಚಿನ್ನದ ಕಿವಿಯೋಲೆ -1, ಸೇರಿ ಒಟ್ಟು 16 ಗ್ರಾಂ ಚಿನ್ನಾಭರಣಗಳನ್ನು ಮತ್ತು ಸ್ಕ್ರೂಡ್ರೈವರ್, ಕಬ್ಬಿಣದ ರಾಡ್, ಟಾರ್ಚ್ ಲೈಟ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,39, 400/ಎ೦ದು ಅ೦ದಾಜಿಸಲಾಗಿದೆ.

ಪ್ರಕರಣದ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮುಲ್ಕಿ ಪೊಲೀಸ್‌ ಠಾಣಾ ಸಿಬ್ಬಂದಿ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here