Home ಕರಾವಳಿ ಬೆಲೆ ಏರಿಕೆ ವಿರುದ್ಧ ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ಪ್ರತಿಭಟನೆ..!

ಬೆಲೆ ಏರಿಕೆ ವಿರುದ್ಧ ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ಪ್ರತಿಭಟನೆ..!

0

ಗುರುಪುರ : ಸಿದ್ದರಾಮಯ್ಯನವರದ್ದು ಸ್ಕ್ಯಾಮ್‌ಗಳ(ಹಗರಣ) ಸರ್ಕಾರ. ಭ್ರಚ್ಟಾಚಾರ ಅತಿರೇಕಕ್ಕೇರಿದೆ. ಮೂಡಾ, ವಾಲ್ಮೀಕಿ ನಿಗಮದಲ್ಲೂ ಭ್ರಷ್ಟಾಚಾರ. ಈ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಹೇಳುತ್ತ ಹೋದರೆ ದಿನಕ್ಕೊಂದು ಪ್ರತಿಭಟನೆ ನಡೆಸಬಹುದು. ಹಾಲು, ಪೆಟ್ರೋಲ್, ಡೀಸೆಲ್, ಮುದ್ರಾಂಕ ದರ, ಆಲ್ಕೋಹಾಲ್ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರನ್ನು ನರಕದ ಕೂಪಕ್ಕೆ ಇಳಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದರು.
ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಮಂಗಳೂರು ನಗರ ಉತ್ತರ ಮಂಡಲ ಮಹಿಳಾ ಮೋರ್ಚಾವು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ರೈತ ವಿರೋಧಿಯಾಗಿರುವ ಸಿದ್ದರಾಮಯ್ಯ ಸರ್ಕಾರ ರಸಗೊಬ್ಬರ ಮತ್ತು ಕೃಷಿ ಬೀಜದ ಬೆಲೆ ಏರಿಸಿದೆ. ಗ್ಯಾರಂಟಿಗಾಗಿ ಕಾಂಗ್ರೆಸ್ ಭ್ರಷ್ಟಾಚಾರದ ಮಾರ್ಗ ಹಿಡಿದಿದೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ ಎಂದರು.



ಮoಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ರಕ್ತ ಕುಡಿಯುತ್ತಿದೆ. ಅಧಿಕಾರ ತ್ಯಜಿಸುವುಕ್ಕಿಂತ ಮುಂಚೆ ಸಾಕಷ್ಟು ಸೈಟು ಮಾಡುವ ಗುರಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಶೀಘ್ರ ಜನರು ಉತ್ತರ ಕೊಡಲಿದ್ದಾರೆ ಎಂದರು.
ಮಂಡಲ ಉಪಾಧ್ಯಕ್ಷರಾದ ಅಮೃತಲಾಲ್ ಡಿ’ಸೋಜ ಮಾತನಾಡಿ, ಹಾಲಿನ ದರ ಏರಿಸಿ ಮಹಿಳೆಯರ ಪಾಲಿಗೆ ವಿಲನ್ ಆಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ವಿಷಯದಲ್ಲಿ ಮೌನವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಸರ್ಕಾರದಿಂದ ಒಂದು ರೋಡ್ ಅಥವ ತೋಡು ಕೂಡ ಆಗಲಿಲ್ಲ ಬರೀ ಬೆಲೆ ಏರಿಕೆಯ ಸರ್ಕಾರ ಎಂದರು…
ಪ್ರತಿಭಟನಾ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುನೀತಾ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ರಾಜೇಶ್, ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರ ನಿರಂಜನ್,ಸ್ವಪ್ನಾ ಸುನಿಲ್ ಉಪಾಧ್ಯಕ್ಷ ರಾದ ಆನಂದ ಪಾಂಗಳ,ಸೋಹನ್ ಅತಿಕಾರಿ,ಮಹಾಶಕ್ತಿ ಕೇಂದ್ರ ಪ್ರಮುಖರಾದ ಶೋಧನ್ ಆದ್ಯಪಾಡಿ, ತಮ್ಮಯ್ಯ ಪೂಜಾರಿ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಸದಸ್ಯರಾದ ಸತೀಶ್ ಪೂಜಾರಿ , ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ , ಶೇಖರ್ ನೆಲಚ್ಚಿಲ್ , ವಿವಿಧ ಪಂಚಾಯತ್‌ಗಳ ಬಿಜೆಪಿ ಬೆಂಬಲಿದ ಅಧ್ಯಕ್ಷರು ಮತ್ತು ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು, ಮಂಡಲಪದಾಧಿಕಾರಿಗಳು, ಮೋರ್ಚಗಳ ಪದಾಧಿಕಾರಿಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here