Home ತಾಜಾ ಸುದ್ದಿ ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ : ಅರ್ಹ ಬಾಲಕಿಯರ ಖಾತೆಗೆ ರೂ.1 ಲಕ್ಷ

ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ : ಅರ್ಹ ಬಾಲಕಿಯರ ಖಾತೆಗೆ ರೂ.1 ಲಕ್ಷ

0

ಚಿತ್ರದುರ್ಗ ಜಿಲ್ಲೆಯ 1647 ಬಾಲಕಿಯರು, ಹದಿನೆಂಟು ವರ್ಷದ ಹಿಂದೆ ರಾಜ್ಯದಲ್ಲಿ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಯ ತಲಾ ಒಂದು ಲಕ್ಷ ರೂ. ಲಾಭವನ್ನು ಪಡೆಯಲಿದ್ದಾರೆ.


ಜಿಲ್ಲೆಯಲ್ಲಿಈ ಯೋಜನೆಯಡಿ ನೋಂದಾಯಿಸಿದ ಹದಿನೆಂಟು ವರ್ಷ ಪೂರ್ಣಗೊಂಡ ಏಪ್ರಿಲ್‌ ಮತ್ತು ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿ ಬೆನಿಫಿಷರ್‌ಗೆ ಅರ್ಹರಾಗಿದ್ದು, ಈ ಹಣ ಇನ್ನೆರಡು ತಿಂಗಳಲ್ಲಿಅರ್ಹ ಫಲಾನುಭವಿಗಳ ಖಾತೆಗೆ ಆದ್ಯತೆ ಮೇರೆಗೆ ಜಮೆ ಆಗಲಿದೆ. ಈಗಾಗಲೇ ಅಗತ್ಯ ದಾಖಲೆಗಳನ್ನು ಇಲಾಖೆಯು ಪಡೆಯಲು ಮುಂದಾಗಿದೆ.

ಲಿಂಗಾನುಪಾತ ಉತ್ತಮ ಪಡಿಸಲು, ಹೆಣ್ಣು ಭ್ರೂಣ ಹತ್ಯೆ ತಡೆಯಲು, ಬಾಲ್ಯ ವಿವಾಹ ಪದ್ಧತಿಗೆ ಬ್ರೇಕ್‌ ಹಾಕಲು, ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮ ಪಡಿಸಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರಕಾರವು ನಿಶ್ಚಿತ ಠೇವಣಿ ಹೂಡಿ, ಈ ಮಗುವಿಗೆ ಹದಿನೆಂಟು ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಸದುದ್ದೇಶದಿಂದ 2006-07 ರಲ್ಲಿ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಗೆ ಪ್ರಸ್ತುತವಾಗಿ ಹದಿನೆಂಟು ವರ್ಷವಾಗಿರುವ ಹಿನ್ನೆಲೆ ಎಲ್ಲ ತಾಲೂಕುಗಳ ಸಿಡಿಪಿಒ ಇಲಾಖೆಯು ಪರಿಪಕ್ವ ಹಣ ನೀಡಲು ಈಗಾಗಲೇ ಅರ್ಹರಿಂದ ಅರ್ಜಿ ಮತ್ತು ಅಗತ್ಯ ದಾಖಲೆ ಸಂಗ್ರಹಿಸುತ್ತಿದೆ.

ಈ ಯೋಜನೆಯ ಹಣ ಪಡೆಯಲು ಬಿಪಿಎಲ್‌ ಕಾರ್ಡ್‌, ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರಿರದಂತಿರಬೇಕು. (ಬಹುಪತಿ-ಪತ್ನಿಯರನ್ನು ಹೊಂದಿದ್ದರೂ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ಅರ್ಹರು). ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.

LEAVE A REPLY

Please enter your comment!
Please enter your name here