ಶೂಲಿನ್ ಫಿಲಂಸ್ ನಿರ್ಮಾಣದ ಮಂಗಳೂರಿನ ರಾಕೇಶ್ ಕದ್ರಿ ನಿರ್ದೇಶನದ “ಹ್ಯಾಪಿ ಬರ್ತ್ ಡೇ ಟು ಮೀ” ಕನ್ನಡ ಚಲನಚಿತ್ರವು ಇದೇ ಜೂನ್ 28 ರಿಂದ ಪ್ರಮುಖ ಒ.ಟಿ.ಟಿ ಪ್ಲಾಟ್ ಫಾರಂಗಳಾದ ಹಂಗಾಮ ಪ್ಲೇ, ಏರ್ಟೆಲ್ X ಸ್ಟ್ರೀಮ್, ವಿಐ ಮೂವೀಸ್ & ಟಿವಿ, ಟಾಟಾ ಪ್ಲೇ BINGE, ಜಸ್ಟ್ ವಾಚ್, ವಾಚೊ ಗಳಲ್ಲಿ ಪ್ರಸಾರವಾಗಲಿದೆ.



ಟೋಬಿ, ಸಪ್ತ ಸಾಗರದ ಆಚೆ ಎಲ್ಲೋ ಚಿತ್ರದ ಖ್ಯಾತಿಯ ನಟಿ ಚೈತ್ರ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇವರೊಂದಿಗೆ ಸಿದ್ದಾರ್ಥ ಮಾಧ್ಯಮಿಕ, ಸಿದ್ದು ಮೂಲಿಮನಿ,ಗೋಪಾಲ ಕೃಷ್ಣ ದೇಶಪಾಂಡೆ, ನಾಟ್ಯ ರಂಗ, ಅರ್ಚನಾ ಕೊಟ್ಟಿಗೆ, ಸುಹಾನ್ ಪ್ರಸಾದ್, ರಚನಾ ರೈ, ರಾಹುಲ್ ಅಮೀನ್ ಹಾಗೂ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


ಇನ್ನುಳಿದಂತೆ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್ ಪಿ , ಸಂಗೀತ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶನ ವಿನಯ್ ಶಂಕರ್, ಸಂಕಲನ ಹಾಗೂ ಕಲರಿಸ್ಟ್ ರಾಹುಲ್ ವಶಿಷ್ಠ ಕಾರ್ಯ ನಿರ್ವಹಿಸಿದ್ದಾರೆ.
ಈಗಾಗಲೇ ಹಲವು ತುಳು ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿರುವ ರಾಕೇಶ್ ಕದ್ರಿ ತುಳುವಿನ ಹಿಟ್ ಕಾಮಿಡಿ ಸಿನಿಮಾ ಗಿರ್ ಗಿಟ್ ನ ನಿರ್ದೇಶಕರೂ ಕೂಡ ಹೌದು. ಈಗಾಗಲೇ ಚಿತ್ರದ ಟೀಸರ್ ಹಾಗೂ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.