Home ಕರಾವಳಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್: ಸೌಜನ್ಯ ಕೊಲೆ ಹಿಂದೆ ಜಾಗದ ಮೋಹ

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್: ಸೌಜನ್ಯ ಕೊಲೆ ಹಿಂದೆ ಜಾಗದ ಮೋಹ

0

ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಿಂದೆ ಜಾಗದ ಮೋಹ ಇದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಸಂತ ಬಂಗೇರ, ಧರ್ಮಸ್ಥಳ ಹೆಗಡೆ ಪರಿವಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇ ಬಾರದು, ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ನನ್ನ ತಂದೆಯೂ ಜಮೀನ್ದಾರ ಆಗಿದ್ದರು, ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ ವಶಪಡಿಸಿಕೊಳ್ಳುತ್ತಿದ್ದಾರೆ. ಬಿಟ್ಟಿಯಾಗಿ ಜಮೀನು ಸಿಕ್ಕಿದರೆ ಆ ಪರಿವಾರಕ್ಕೆ ಭಾರೀ ಖುಷಿ. ಹಣ ಕೊಟ್ಟು ಜಮೀನು ಪಡೆದಿದ್ದರೆ ಅವರಿಗೆ ಕೊಂಚ ಬಿಸಿ, ಇಂತಹ ಜಮೀನ್ದಾರಿಕೆಯನ್ನು ವಿರೋಧಿಸಬೇಕು.

ವಿರೋಧಿಸದೇ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತದೆ. ಸೌಜನ್ಯ ಪ್ರಕರಣವೂ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯ ಕೊಲೆ ನಡೆದಿರುವುದೂ ಜಾಗದ ವಿಚಾರಕ್ಕಾಗಿ ಎಂದು ಸಾರ್ವಜನಿಕ ವೇದಿಕೆಯಲ್ಲಿ ವಸಂತ ಬಂಗೇರ ಹೇಳಿದ್ದಾರೆ.

LEAVE A REPLY

Please enter your comment!
Please enter your name here