ಉತ್ತರಖಂಡ: ಕೇದಾರನಾಥ ಬಳಿ ಹೆಲಿಕಾಪ್ಟರ್ ಒಂದು ಗಾಳಿಯಲ್ಲೇ ಕಟ್ಟು ನಿಂತಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಭಾರಿ ಅನಾಹುತ ತಪ್ಪಿದೆ. ಚಾರ್ ಧಾಮ್ ಯಾತ್ರೆ ಮುಂದುವರೆದಿದೆ. ಕೇದಾರನಾಥ ಧಾಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಆದರೆ, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಹೆಲಿಕಾಪ್ಟರ್ನಲ್ಲಿ 6 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ 3 ಲಕ್ಷ 40 ಸಾವಿರ ಯಾತ್ರಿಕರು ಗಂಗೋತ್ರಿ-ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಇನ್ನು ನಿಷೇಧಾಜ್ಞೆ ನಡುವೆಯೂ ದೇವಾಲಯದ ಆವರಣದಲ್ಲಿ ವಿಡಿಯೋ ಮಾಡದಂತೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಬದರಿನಾಥ ಧಾಮದಲ್ಲಿರುವ ದೇವಾಲಯದ ಆವರಣದಿಂದ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೋ ಮಾಡುತ್ತಿದ್ದ 37 ಮಂದಿಗೆ ಚಲನ್ ಜಾರಿ ಮಾಡಲಾಗಿದೆ. ಗುರುವಾರದವರೆಗೆ 1 ಲಕ್ಷ 77 ಸಾವಿರದ 749 ಭಕ್ತರು ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ. ಸಂಘಟಿತ ಪ್ರಯಾಣಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ. ಪ್ರವಾಸ ಮತ್ತು ಪ್ರಯಾಣ ಏಜೆನ್ಸಿಗಳಿಗೂ ಸೂಚನೆಗಳನ್ನು ನೀಡಲಾಗಿದೆ. ಈ ಸೂಚನೆಯ ಪ್ರಕಾರ ನೋಂದಾಯಿತ ಪ್ರಯಾಣಿಕರನ್ನು ಮಾತ್ರ ಕರೆತರುವಂತೆ ಸೂಚನೆ ನೀಡಲಾಗಿದೆ.