Home ತಾಜಾ ಸುದ್ದಿ ರಾಜ್ಯ ‘ಫಿಲ್ಮ್ ಚೇಂಬರ್’ ನೂತನ ಅಧ್ಯಕ್ಷರಾಗಿ ‘ಎನ್.ಎಂ ಸುರೇಶ್’ ಆಯ್ಕೆ

ರಾಜ್ಯ ‘ಫಿಲ್ಮ್ ಚೇಂಬರ್’ ನೂತನ ಅಧ್ಯಕ್ಷರಾಗಿ ‘ಎನ್.ಎಂ ಸುರೇಶ್’ ಆಯ್ಕೆ

0

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆ ನಡೆದಂತ ಚುನಾವಣೆಯಲ್ಲಿ 2023-24ನೇ ಸಾಲಿಗೆ ಅಧ್ಯಕ್ಷರಾಗಿ ಎನ್.ಎಂ ಸುರೇಶ್ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಉಪಾಧ್ಯಕ್ಷರಾಗಿ ಪ್ರಮೀಳಾ, ವೆಂಕಟೇಶ್, ನರಸಿಂಹಲು ಆಯ್ಕೆಯಾಗಿದ್ದಾರೆ.


ಶನಿವಾರದ ನಿನ್ನೆ ನಡೆದಂತ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಎಂ ಸುರೇಶ್, ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್ ಹಾಗೂ ಎ.ಗಣೇಶ್ ಸ್ಪರ್ಧಿಸಿದ್ದರು.

ಅಂತಿಮವಾಗಿ ಎನ್.ಎಂ ಸುರೇಶ್ ಅವರು 337 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಜೋಷಾಯಿ, ವಿತರಕರ ವಲಯದಿಂದ ಜಿ.ವೆಂಕಟೇಶ್, ಪ್ರದರ್ಶಕರ ವಲಯದಿಂದ ಎಂ.ನರಸಿಂಹಲು ಅವರು ಗೆಲುವು ಸಾಧಿಸಿದ್ದಾರೆ.

ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕರ ವಲಯದಿಂದ ಭಾ.ಮ ಹರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಹಿರಿಯ ನಟ ಸುಂದರ್ ರಾಜು ಹಾಗೂ ಖಜಾಂಚಿಯಾಗಿ ಜಯಸಿಂಹ ಮುಸುರಿ ಅವರು ಆಯ್ಕೆಯಾಗಿದ್ದಾರೆ.

ಅಂದಹಾಗೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿನ್ನೆಯ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,599ರಲ್ಲಿ 967 ಮಂದಿ ತಮ್ಮ ಮತವನ್ನು ಚಲಾಯಿಸಿದರು.

LEAVE A REPLY

Please enter your comment!
Please enter your name here