ಮಂಗಳೂರು: ರಾಜ್ಯ ಗುಪ್ತಚರ ಇಲಾಖೆಯ ದಕ್ಷಿಣಕನ್ನಡ ಜಿಲ್ಲೆಯ ಎಎಸ್ಐ ಆಗಿರುವ ರವೀಂದ್ರನಾಥ ರೈ ಅವರ ಸೇವಾವಧಿ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಅವರ ಮಾತೃ ಇಲಾಖೆಯಾದ ಸಿವಿಲ್ ಪೋಲೀಸ್ ಗೆ ಅವರನ್ನು ಮರು ಸೇರ್ಪಡೆಗೊಳಿಸಲಾಗಿದೆ.
ಗುಪ್ತಚರ ಇಲಾಖೆ ವತಿಯಿಂದ ರವೀಂದ್ರನಾಥ ರೈ ಯವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ಗುಪ್ತಚರ ಇಲಾಖೆ ಕಛೇರಿಯಲ್ಲಿ ನಡೆದ ಈ ಸಮಾರಂಭಧಲಿ ಜಿಲ್ಲೆಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕದ್ರಿ, ಮೂಡಬಿದಿರೆ,ಬಂದರು ಪೋಲೀಸ್ ಠಾಣೆಯಲ್ಲಿ ವಿವಿಧ ಕರ್ತವ್ಯ ನಿರ್ವಹಿಸಿದ್ದ ರವೀಂದ್ರನಾಥ ಮುಂದಿನ ದಿನಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.