ಬಿಹಾರ್: ಯುವ ನಟಿಯೊಬ್ಬರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.27ರಂದು ಬಿಹಾರದಲ್ಲಿ ನಡೆದಿದೆ. ಜೋದ್‌ಪುರಿ ನಟಿ ಅಮೃತಾ ಪಾಂಡೆ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೂ ಮೊದಲು ನಿಗೂಢಾರ್ಥದಲ್ಲಿ ವ್ಯಾಟ್ಸಪ್ ಸ್ಟೇಟಸ್ ಬರೆದು ಹಾಕಿದ್ದರು.
ಪೊಲೀಸರಿಗೆ ಅದಾಮ್‌ಪುರದ ದಿವ್ಯಾಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಕರೆ ಬರುತ್ತದೆ. ಪೊಲೀಸರು ಬಂದು ಪರಿಶೀಲಿಸಿದಾಗ ಬೆಡ್ ಮೇಲೆ ಅಮೃತಾ ಮೃತದೇಹ ಇತ್ತು. ಇದಕ್ಕೆ ಮೊದಲು ಅಮೃತಾಳ ಸಹೋದರಿ ರೂಂ ನ ಒಳಗಡೆ ಹೋಗಿದ್ದಾರೆ. ಅಕ್ಕನನ್ನು ನೋಡಿ ಶಾಕ್ ಆಗಿದ್ದರು. ಆ ಕೂಡಲೇ ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ. ಆಗಾಗಲೇ ಸಮಯ ಮಿಂಚಿ ಹೋಗಿತ್ತು.
ಅಮೃತಾ ಸಾಯುವುದಕ್ಕೂ ಮೊದಲು ವ್ಯಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದರು. “ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸಡಿಲಗೊಳಿಸಿದ್ದೇವೆ” ಎಂದು ಬರೆದು ಸ್ಟೇಟಸ್ ಹಾಕಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ಪತಿ ಚಂದ್ರಮಣಿ ಇನ್ನೋರ್ವಳನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಹುಟ್ಟಿಹಾಕಿದೆ. ಇನ್ನು ಅಮೃತಾಳ ಪತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, 2022ರಲ್ಲಿ ಅಮೃತಾ ಚಂದ್ರಮಣಿಯನ್ನು ಮದುವೆ ಆಗಿದ್ದರು.
ಇನ್ನೂ ಕುಟುಂಬ ಸದಸ್ಯರು ಅಮೃತಾ ಖಿನ್ನತೆಗೆ ಒಳಗಾಗಿದ್ದಳು. ಸಿನೆಮಾದಲ್ಲಿ ಸರಿಯಾದ ಚಾನ್ಸ್ ಸಿಗುತ್ತಿಲ್ಲ ಎಂದು ಖಿನ್ನತೆ ಒಳಗಾಗಿದ್ದಳು ಎಂದು ಹೇಳಿದ್ದಾರೆ. ಅವರು ‘ಪ್ರತಿಶೋಧ’ ಹೆಸರಿನ ಸೀರಿಸ್ನಲ್ಲಿ ನಟಿಸಿದ್ದರು. ಅವರು ‘ದೀವಾನಪನ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಅವರ ಸಾವಿಗೆ ನಿಜಕ್ಕೂ ಖಿನ್ನತೆ ಕಾರಣವೇ ಅಥವಾ ಬೇರೆ ಏನಾದರೂ ಬೇರೆ ಕಾರಣವೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.