Home ಕರಾವಳಿ ಬಂಟ್ವಾಳ: ಮಲಗಿದ್ದಲ್ಲೇ ಯುವತಿ ಮೃತ್ಯು

ಬಂಟ್ವಾಳ: ಮಲಗಿದ್ದಲ್ಲೇ ಯುವತಿ ಮೃತ್ಯು

0

ಬಂಟ್ವಾಳ: ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಮದ್ವ ಎಂಬಲ್ಲಿ ನಡೆದಿದೆ.


ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ. ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ.

ಊಟ ಮಾಡಿ ಮಲಗಿದ ಯುವತಿ ಬೆಳಿಗ್ಗೆ ನೋಡುವಾಗ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ತಂದೆ ಮತ್ತು ಅಣ್ಣ ಇಬ್ಬರು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ತಾಯಿ ಮತ್ತು ಮಗಳು ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳುವುದಿಲ್ಲ ಮಾತನಾಡುವುದಿಲ್ಲ ಎಂದು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ದೇರಳಕಟ್ಟೆ ಕೆ‌ಎಸ್.ಹೆಗ್ಡೆ ಯಲ್ಲಿ ಮರಣೋತ್ತರ ಪರೀಕ್ಷೆ ಗಾಗಿ ಕೊಂಡೋಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಹೇಳಲಾಗುತ್ತಿತ್ತು. ಆದರೆ ಬ್ರೈನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯವಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ ಸ್ಪಷ್ಟವಾದ ಕಾರಣ ಸಿಗಬಹುದು.ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಕ್ರಿಯಾಶೀಲೆ ಯುವತಿ ಓಂಕಾರ ಫ್ರೆಂಡ್ಸ್ (ರಿ) ಮದ್ವ ಇದರ ಮಹಿಳಾ ಘಟಕದ ಸದಸ್ಯೆಯಾಗಿರುವ ಮಿತ್ರ ಶೆಟ್ಟಿ ಬಿಸಿರೋಡಿನ ವಕೀಲರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅತ್ಯಂತ ಕ್ರಿಯಾಶೀಲ ಯುವತಿಯಾಗಿದ್ದು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಳು

LEAVE A REPLY

Please enter your comment!
Please enter your name here