Home ಕರಾವಳಿ ಚುನಾವಣೆ ಪ್ರಕ್ರಿಯೆ ಸುಸೂತ್ರ ; ಬಿರು ಬಿಸಿಲ ನಡುವೆಯೂ ಹಕ್ಕು ಚಲಾಯಿಸಿದ ಮತದಾರರು, ಚುನಾವಣೆ ಕೆಲಸದಲ್ಲಿ...

ಚುನಾವಣೆ ಪ್ರಕ್ರಿಯೆ ಸುಸೂತ್ರ ; ಬಿರು ಬಿಸಿಲ ನಡುವೆಯೂ ಹಕ್ಕು ಚಲಾಯಿಸಿದ ಮತದಾರರು, ಚುನಾವಣೆ ಕೆಲಸದಲ್ಲಿ ತೊಡಗಿದ ಕಾರ್ಯಕರ್ತರು, ಜಿಲ್ಲಾಡಳಿತಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅಭಿನಂದನೆ

0

ಮಂಗಳೂರು:ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಪಾಲಿಗೆ ಹಬ್ಬ. ಮತದಾರರು ನೇರವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಮುಂದಿನ ಆಡಳಿತ ಯಾರು ಮಾಡಬೇಕೆಂದು ನಿರ್ಧರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತದಾರರು ಬಿರು ಬಿಸಿಲನ್ನೂ ಲೆಕ್ಕಿಸದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.‌ ಮತದಾನಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ಮತದಾರ ಬಾಂಧವರಿಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅಭಿನಂದನೆ ಸಲ್ಲಿಸಿದ್ದಾರೆ.‌


ಅಲ್ಲದೆ, ಇಡೀ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸಿದ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಅಧಿಕಾರಿ ವರ್ಗಕ್ಕೂ ಧನ್ಯವಾದ ಹೇಳಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಪಕ್ಷದ ಕಾರ್ಯಕರ್ತರು ಪ್ರಖರ ಬಿಸಿಲಿನ ನಡುವೆಯೂ ಒಟ್ಟಾಗಿ ಮತದಾನ ಪ್ರಕ್ರಿಯೆಗೆ ಕೈಜೋಡಿಸಿದ್ದಾರೆ.

ಬಿಜೆಪಿ ಪಾಲಿಗೆ ದೇವದುರ್ಲಭ ಕಾರ್ಯಕರ್ತರೇ ಶಕ್ತಿ. ಕರಾವಳಿಯ ಕಠಿಣ ಬಿಸಿಲಿನ ನಡುವೆಯೂ ಬೂತ್ ಏಜಂಟರಿಂದ ಹಿಡಿದು ಮತಗಟ್ಟೆ ಒಳಗೆ, ಹೊರಗೆ ಕಾರ್ಯ ನಿರ್ವಹಿಸಿದ ಪಕ್ಷದ ಕಾರ್ಯಕರ್ತರು, ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಪ್ರೇರಣೆ ನೀಡಿದ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ‌. ತಿಂಗಳ ಪರ್ಯಂತ ನಡೆದ ಚುನಾವಣೆ ಪ್ರಚಾರ, ಮನೆ ಮನೆಗೆ ತೆರಳಿ ಜನರು ಹಕ್ಕು ಚಲಾಯಿಸಲು ಪ್ರೇರಣೆ ನೀಡಿದ ಕಾರ್ಯಕರ್ತರು, ಬೂತ್ ಪ್ರಮುಖರು, ಪಕ್ಷದ ಸಭೆಗಳಿಗೆ ಬಂದು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರಿಗೆ, ಪ್ರಧಾನಿ ಮೋದಿ ಅಭಿಮಾನಿಗಳಿಗೆ ಅಭಿನಂದನೆ ಹೇಳುತ್ತೇನೆ. ಚುನಾವಣೆ ಪ್ರಕ್ರಿಯೆ ಉದ್ದಕ್ಕೂ ಪ್ರಚಾರ ನೀಡಿ ಎಲ್ಲ ರೀತಿಯ ಸಹಕಾರ ನೀಡಿದ ಮಾಧ್ಯಮ ಬಂಧುಗಳಿಗೂ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನೂ ಹೊಂದಿದ್ದೇನೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‌

LEAVE A REPLY

Please enter your comment!
Please enter your name here