ವಿಜಯಪುರ: ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮೂಢ ನಂಬಿಕೆಗೆ ವ್ಯಕ್ತಿಯಬ್ಬ ದೇವರ ಎದುರಿಗೆ ಹಾಕಿದ್ದ ಕೆಂಡದ ಮೇಲೆ ಕಂಬಳಿ ಹಾಸಿಕೊಂಡು ಕುಳಿತ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಹಬ್ಬ ಆಚರಿಸಲಾಗುತ್ತಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಇಂದು ನಸುಕಿನ ಜಾವ ಗ್ರಾಮದ ಅಲಾಯಿ ದೇವರ ಎದುರುಗೆ ಹಾಕಿದ ಕೆಂಡದ ಮೇಲೆ ಯಲ್ಲಾಲಿಂಗ ಹಿರೇಹಾಳ ಎಂಬ ವ್ಯಕ್ತಿ ಕಂಬಳಿ ಹಾಸಿ ಕುಳಿತಿದ್ದಾರೆ.
ಕೆಲ ಕ್ಷಣ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಭಕ್ತಿ ಸಮರ್ಪಣೆ ಮಾಡಿದ್ದಾರೆ. ಬಳಿಕ ಬರಿಗೈಯ್ಯಲ್ಲಿ ಕೆಂಡ ತುಂಬಿ ಕೆಂಡದಾರತಿ ಮಾಡಿದ್ದಾರೆ.
ಒಟ್ಟಿನಲ್ಲಿ ಯಲ್ಲಾಲಿಂಗನ ಭಕ್ತಿ ಪಾರಾಕಾಷ್ಟೆಗೆ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಬೆಂಕಿ ಮೇಲೆ ಕುಳಿತರೂ ಕೈಯ್ಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಇದು ಅಲಾಯಿ ದೇವರ ಪವಾಡವೆಂದು ಜನರ ನಂಬಿಕೆಯಾದರೆ. ಇನ್ನೂ ಕೆಲವರು ಏನಾದರೂ ಹೆಚ್ಚು ಕಡಿಮೆ ಯಾಗಿದ್ರೆ ಎಂಬ ಮಾತನ್ನೂ ಹೇಳಿತ್ತಿದ್ದಾರೆ.