Home ಕರಾವಳಿ ಬಂಟ್ವಾಳ: ಬಸ್‌ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ..!

ಬಂಟ್ವಾಳ: ಬಸ್‌ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ..!

0

ಬಂಟ್ವಾಳ :  ಖಾಸಗಿ ಬಸ್ಸಿನಲ್ಲಿ ಬೆಂಗಳೂರಿನಿಂದ ಊರಿಗೆ ಪ್ರಯಾಣಿಸುತ್ತಿದ್ದ ಬಂಟ್ವಾಳ ಮೂಲದ ಯುವತಿಗೆ  ಲೈಂಗಿಕ ಕಿರುಕುಳ  ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಳ್ತಂಗಡಿ ಮೂಲದ ಮಹಮ್ಮದ್  ಅಝೀಮ್ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಸಹಪ್ರಯಾಣಿಕನಾಗಿದ್ದ ಆರೋಪಿ ಅಝೀಮ್  ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದ. ಮೂಲತಃ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಕಲಿಯುತ್ತಿದ್ದು ಮಂಗಳವಾರ ರಾತ್ರಿ ಖಾಸಗಿ ಬಸ್ಸಿನಲ್ಲಿ ಊರಿಗೆ ಪ್ರಯಾಣಿಸಿದ್ದರು. ಬಸ್‌ ಸಕಲೇಶಪುರ ಕಳೆದು ಮುಂದಕ್ಕೆ ಸಾಗುತ್ತಿದ್ದಂತೆಯೇ ಮಲಗಿದ್ದ ವಿದ್ಯಾರ್ಥಿನಿಯ ಮೈಮೇಲೆ ಸಹಪ್ರಯಾಣಿಕ ಕೈ ಮಾಡಿರುವುದು ಕಂಡು ಬಂತು. ಬಳಿಕ ಮತ್ತೊಮ್ಮೆ ಇದೇ ಯತ್ನ ನಡೆದಾಗ ಕೃತ್ಯವನ್ನು ಬಸ್ಸಿನ ಚಾಲಕನ ಗಮನಕ್ಕೆ ತಂದರು. ಆದರೆ ಚಾಲಕನಿಂದ ಯಾವುದೇ ಸ್ಪಂದನೆ ದೊರೆಯದಿದ್ದಾಗ, ಬಸ್ಸಿನಲ್ಲಿದ್ದ ಕೆಲವು ಸಹ ಪ್ರಯಾಣಿಕರು ನೆರವಿಗೆ ಧಾವಿಸಿ ಆತನನ್ನು ವಿಚಾರಿಸಿದಾಗ ಬೆಳ್ತಂಗಡಿಯ ಲಾಯಿಲ ಗ್ರಾಮದ ಮಹಮ್ಮದ್ ಅಝೀಮ್ ಎಂದು ತಿಳಿಸಿದ್ದ. ಮುಂದಕ್ಕೆ ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಎಂದು ಆಕೆ ಹೇಳಿದ ಬಳಿಕ ಆರೋಪಿ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದ.ಪ್ರಕರಣವನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಲಭ್ಯ ಮಾಹಿತಿಗಳನ್ನಾಧರಿಸಿ ಆರೋಪಿ ಮಹಮ್ಮದ್ ಅಝೀಮ್ ನನ್ನು  ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ವಿದ್ಯಾರ್ಥಿನಿ ಮನೆಗೆ ಬುಧವಾರ ಆರ್‌ ಎಸ್‌ ಎಸ್ ಮುಖಂಡ ಡಾ. ಕಲ್ಲಡ್ಲ ಪ್ರಭಾಕರ್ ಭಟ್ ಭೇಟಿ ಧೈರ್ಯ ತುಂಬಿ, ಯುವತಿಯ ಧೈರ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈ ವೇಳೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಇಂತಹ ಪ್ರಕರಣಗಳು ನಿತ್ಯನಿರಂತರವಾಗಿ ನಡೆಯುತ್ತಿದೆ, ಭಯೋತ್ಪಾದಕರ ರೀತಿಯಲ್ಲಿ ಹೆಣ್ಮಕ್ಕಳ ಮೇಲೆ ಅನಾಚಾರ ಮಾಡುವಂತಹ ಘಟನೆಗಳು ನಡೆಯುತ್ತಿದೆ. ಸರಕಾರ ಹಾಗೂ ಪೋಲಿಸ್ ‌ಇಲಾಖೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.ಇಲ್ಲದಿದ್ದರೆ ಅರಾಜಕತೆ ನಿರ್ಮಾಣ ಮಾಡುವ ಸಾಧ್ಯತೆಗಳಿವೆ,ಇದು ದ‌.ಕ.ಜಿಲ್ಲೆ. ಎಚ್ಚರಿಕೆಯ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಸರಕಾರ ಬಂದ ಮೇಲೆ ಬಾರಿ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಮುಂದುವರಿದು ಹುಬ್ಬಳ್ಳಿಯಲ್ಲಿ ಹತ್ಯೆ ನಡೆದಿದೆ, ಇದೀಗ ಮತ್ತೊಂದು ಪ್ರಕರಣ ಅದೇ ಭಾಗದಲ್ಲಿ ನಡೆದಿದೆ. ಹಿಂದೂ ಸಮಾಜದ ಮೇಲೆ ಮತ್ತು ಹೆಣ್ಣ್ಮಕ್ಕಳ ಮೇಲೆ ಅನ್ಯಾಯಗಳು ನಡೆದರೆ ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದ ಅವರು ಸರಕಾರ ಎಚ್ಚೆತ್ತು ಸರಿಯಾದ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here