ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಪಾಲ್ಗುಣಿ ಇದರ “ಮೀಟ್ ಅಂಡ್ ಗ್ರೀಟ್ ದ ರಿಯಲ್ ಹೀರೋ” ಅಭಿಯಾನದಲ್ಲಿ 50 ಜನ ಸಮಾಜ ಸೇವಕರನ್ನು ಗುರುತಿಸಿ ಅಭಿನಂದಿಸಲಾಯಿತು.
77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಪಾಲ್ಗುಣಿ ಮತ್ತು ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ಮಂಜೂಟ್ಟಿ ಅಂಗನವಾಡಿ ಕೇಂದ್ರ ಪಂಜಿಮೊಗರುನಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಗಣೇಶ್ ಕುಲಾಲ್ ಇವರು ಧ್ವಜಾರೋಹನವನ್ನು ನೆರವೇರಿಸಿದರು, ಹಾಗೆಯೇ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಪಾಲ್ಗುಣಿ ಇವರು ಆಯೋಜಿಸಿದ “ಮೀಟ್ ಅಂಡ್ ಗ್ರೀಟ್ ದ ರಿಯಲ್ ಹೀರೋ” ಎಂಬ ಅಭಿಯಾನಕ್ಕೆ ಮಂಗಳೂರಿನ ಮಹಾನಗರ ಪಾಲಿಕೆ ಸದಸ್ಯರಾದ ಅನಿಲ್ ಕುಮಾರ್ ಇವರು ಚಾಲನೆಯನ್ನು ನೀಡಿದರು
“ಮೀಟ್ ಅಂಡ್ ಗ್ರೀಟ್ ದ ರಿಯಲ್ ಹೀರೋ” ಈ ಅಭಿಯಾನದಲ್ಲಿ ನಮ್ಮ ಸಮಾಜದ ಒಳಿತಿಗಾಗಿ ಸಮಾಜಮುಖಿಯಾಗಿ ಕೆಲಸ ಮಾಡುವ ಸುಮಾರು 50ಕ್ಕೂ ಹೆಚ್ಚು ಜನರನ್ನು ಗುರುತಿಸಿ
ಅಭಿನಂದಿಸಲಾಯಿತು ಪ್ರಮುಖವಾಗಿ ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು,ಡಾಕ್ಟರ್, ಶಿಕ್ಷಕರು, ಮಂಗಳೂರು ಮೆಸ್ಕಾಂ ಸಿಬ್ಬಂದಿಗಳು, ಟ್ರಾಫಿಕ್ ಪೊಲೀಸ್, ರಿಕ್ಷಾ ಚಾಲಕರು, ಆಂಬುಲೆನ್ಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಪೋಸ್ಟ್ ಮ್ಯಾನ್, ಸ್ಥಳೀಯ ಕಾರ್ಪೊರೇಟರ್ ಮತ್ತು ಹಲವಾರು ಮಂದಿಯನ್ನು ಗುರುತಿಸಲಾಯಿತು.
ವಿಶೇಷವಾಗಿ ಮಾಜಿ ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸರ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಅನಿಲ್ ಕುಮಾರ್ ಈ ಕಾರ್ಯಕ್ರಮಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಇವರು ಅಧ್ಯಕ್ಷತೆಯನ್ನು ವಹಿಸಿದರು ಯುವ ವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಯಶವಂತ ಪೂಜಾರಿಯವರು, ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಲಿಯೋ ಕ್ಲಬ್ ಪಾಲ್ಗುಣಿ ಅಧ್ಯಕ್ಷರಾದ ಅಭಿಲಾಷ ಸುವರ್ಣ ಮತ್ತು ಅಂಗನವಾಡಿ ಕೇಂದ್ರದ ಮುಖ್ಯ ಶಿಕ್ಷಕರಾದ ಪ್ರಮೀಳ ಇವರು ಉಪಸ್ಥಿತರಿದ್ದರು ಸಿಎ ಶ್ರವಣ್ ಕುಮಾರ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.