ರಾಮನಗರ: ಸಂಸದ ಡಿ.ಕೆ ಸುರೇಶ್ ಅವರು ಪ್ರಚಾರದ ವೇಳೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಪಾಕಿಸ್ತಾನ್ ಕೀ ಜೈ ಘೋಷಣೆ ಕೂಗಿರೋದಾಗಿ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಕೂಡ ಆಗಿದೆ.
ರಾಮನಗರ ಜಿಲ್ಲೆಯ ಕುಣಿಗಲ್ ತಾಲೂಕಿನ ಕುದೂರಿನಲ್ಲಿ ಇಂದು ಸಂಸದ ಡಿ.ಕೆ ಸುರೇಶ್ ಅವರು ಮತಯಾಚನೆಯಲ್ಲಿ ತೊಡಗಿದ್ದರು.
ತಮಗೆ ಮತ ನೀಡುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದರು.
ಸಂಸದ ಡಿ.ಕೆ ಸುರೇಶ್ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಂತ ಸಂದರ್ಭದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣ ಕೀ ಜೈ ಜೊತೆಗೆ ಪಾಕಿಸ್ತಾನ್ ಕೀ ಜೈ ಎಂಬುದಾಗಿಯೂ ಘೋಷಣೆ ಕೂಗಿದ್ದಾರೆ ಎನ್ನಲಾಗುತ್ತಿದೆ.
ಈ ಗಂಭೀರ ಆರೋಪವನ್ನು ಮಾಡಿರುವಂತ ಮೈತ್ರಿ ಪಕ್ಷದ ನಾಯಕರು, ವೀಡಿಯೋ ಕೂಡ ವೈರಲ್ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿರುವಂತ ಕಾಂಗ್ರೆಸ್ ನಾಯಕರು, ಕೈ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿಲ್ಲ. ಬಾಲಕೃಷ್ಣ ಕೀ ಜೈ ಅಂತ ಕೂಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.