ಪಡುಬಿದ್ರೆ: ಹೆಜಮಾಡಿಯಲ್ಲಿ ಗುರುವಾರ ತಡರಾತ್ರಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಇದರಲ್ಲಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಜಮಾಡಿ ನಾರಾಯಣ ಗುರು ರಸ್ತೆಯಲ್ಲಿ ಸೂರಜ್ ಸಾಲ್ಯಾನ್ ಹಾಗೂ ಸಂದೇಶ್ ಶೆಟ್ಟಿ ಎಂಬವರ 2 ಗುಂಪುಗಳ ನಡುವೆ ಪೂರ್ವದ್ವೇಷದಿಂದ ಘರ್ಷಣೆ ನಡೆದಿದೆ.
ಚೂರಿ, ರಾಡ್ , ದೊಣ್ಣೆ, ತಲವಾರ್ ಹಾಗೂ ವಿಕೆಟ್ ಹಿಡಿದು ಹಲ್ಲೆ ನಡೆಸಿದ್ದರಿಂದ ಕೆಲವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ ದೂರು ಮತ್ತು ಪ್ರತಿ ದೂರು ಪಡುಬಿದ್ರೆ ಪೊಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಗಾಯಳುಗಳು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡೂ ಪ್ರಕರಣವನ್ನು ದಾಖಲಿಸಿಕೊಂಡ ಪಡುಬಿದ್ರೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳದಲ್ಲಿ ಗಲಭೆ ನಡೆಸಿದವರ ಚಪ್ಪಲಿ, ವಾಚು, ಬೆಲ್ಟ್ ಗಳು ಪತ್ತೆಯಾಗಿದೆ.