ಬೆಳ್ತಂಗಡಿ: ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ದನದ ಮಾಂಸ, ವಧೆ ಮಾಡಿದ್ದ 6 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಅರಮಲೆ ಬೆಟ್ಟ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಅಬ್ದುಲ್ ರಹಿಮಾನ್,(35) ಹಾಗೂ ಕುವೆಟ್ಟು ಗ್ರಾಮ, ಬೆಳ್ತಂಗಡಿ ನಿವಾಸಿ ಇಕ್ಬಾಲ್, (42) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಅರಮಲೆ ಬೆಟ್ಟ ಎಂಬಲ್ಲಿ, ಬದ್ರುದ್ದೀನ್ ಎಂಬಾತನ ಮನೆಯ ಹಿಂಬದಿಯಲ್ಲಿ, ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ, ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೆರೆಗೆ, ಮುರಳೀಧರ್ ಕೆ.ಜಿ, ಪೊಲೀಸ್ ಉಪ ನಿರಿಕ್ಷಕರು, (ಕಾ&ಸು), ಬೆಳ್ತಂಗಡಿ ಪೊಲೀಸ್ ಠಾಣೆರವರು ಹಾಗು ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿ ಮಾರಾಟ ಮಾಡುವರೇ ಶೇಖರಿಸಿಟ್ಟ ಅಂದಾಜು 87ಕೆ.ಜಿ ದನದ ಮಾಂಸ, ಮಾಂಸಕ್ಕಾಗಿ ಕಡಿದಿದ್ದ 6 ಜಾನುವಾರುಗಳನ್ನು ಹಾಗೂ ಮಾಂಸ ಮಾಡಲು ಉಪಯೋಗಿಸಿದ ಪರಿಕರಗಳು ಕಂಡುಬಂದಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 48/2024 ಕಲಂ: 4, 5, 7, 12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವರು ಸಂರಕ್ಷಣೆ ಕಾಯ್ದೆ 2020 ಮತ್ತು ಕಲಂ: 11 ಡಿ ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.