Home ಕರಾವಳಿ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆ- ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆ- ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ

0

ಮಂಗಳೂರು: ಏ.26ರಂದು ನಡೆಯಲಿರುವ ದ.ಕ. ಲೋಕಸಭಾ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಿಂದ ಒಟ್ಟು 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್ ಚೌಟ(42), ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. (53),ಜನತಾ ಪಕ್ಷ ಹಾಗೂ ಜನತಾದಳ (ಯು) ಎರಡಕ್ಕೂ ಸುಪ್ರೀತ್ ಕುಮಾ‌ರ್ ಪೂಜಾರಿ (47), ಬಹುಜನ್ ಸಮಾಜ್ ಪಾರ್ಟಿ (ಬಿಎಸ್ಪಿ)ಯಿಂದ ಕಾಂತಪ್ಪ (63), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಇ.ಮನೋಹರ (47), ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಂಜಿನಿ ಎಂ.(39) ಮತ್ತು ಕರುನಾಡ ಸೇವಕರ ಪಾರ್ಟಿಯಿಂದ ದುರ್ಗಾಪ್ರಸಾದ್ (33) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ (60), ಸತೀಶ್ ಬಿ (28), ಮ್ಯಾಕ್ಸಿಂ ಪಿಂಟೋ (59), ದೀಪಕ್ ರಾಜೇಶ್ ಕುವೆಲ್ಲೋ (48) ನಾಮಪತ್ರ ಸಲ್ಲಿಸಿದ್ದಾರೆ.

ಈ ಪೈಕಿ ಕ್ಯಾ।ಬ್ರಿಜೇಶ್ ಚೌಟ ಮತ್ತು ಆ‌ರ್.ಪದ್ಮರಾಜ್ ಅವರು ತಲಾ ನಾಲ್ಕು ಸೆಟ್, ರಾಜೇಶ್ ಕುವೆಲ್ಲೋ ಅವರು ಮೂರು ಸೆಟ್ ಮತ್ತು ರಂಜಿನಿ ಎಂ. ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸುಪ್ರೀತ್ ಕುಮಾರ್ ಪೂಜಾರಿಯವರು ಜನತಾ ಪಕ್ಷ ಮತ್ತು ಜನತಾ ದಳ(ಯು)ದಿಂದ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here