Home ಕರಾವಳಿ ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಕ್ಯಾ. ಬ್ರಿಜೇಶ್ ಚೌಟ

ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಕ್ಯಾ. ಬ್ರಿಜೇಶ್ ಚೌಟ

0

ಮಂಗಳೂರು: ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಈ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಮುಂದಿನ ದಿನದಲ್ಲಿ ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ. ಜನಸಾಮಾನ್ಯರ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದು ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


ಅವರು ಬುಧವಾರ ಲೋಕಸಭಾ ಚುನಾವಣೆ ಪ್ರಯುಕ್ತ ಪ್ರವಾಸದ ಎಂಟನೇ ದಿನ ಮಂಗಳೂರು ನಗರ ಉತ್ತರ ಮಂಡಲದ ಪ್ರವಾಸದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿಜಿಯವರ ಆಡಳಿತದಲ್ಲಿ ಮಹತ್ವದ ಯೋಜನೆಗಳು ಪ್ರಾಮಾಣಿಕ ಅನುಷ್ಠಾನದಿಂದ ಇಂದು ಯೋಜನೆಗಳು ಜನಸಾಮಾನ್ಯರನ್ನು ಸುಲಭದಲ್ಲಿ ತಲುಪುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ. ಮತದಾರರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆ, ದ.ಕ ಜಿಲ್ಲೆಯನ್ನು ಅಭಿವೃದ್ಧಿಶೀಲ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವಿಶ್ವದಲ್ಲಿ ಹಿಂದೂ ಜೀವನ ಪದ್ಧತಿಗೆ ಮನ್ನಣೆ ತಂದು ಕೊಟ್ಟವರು ನರೇಂದ್ರ ಮೋದಿಯವರು. ದೇಶವನ್ನು ಪರಮ ವೈಭವದ ಕಡೆ ಕೊಂಡಯುವ ನಿಟ್ಟಿನಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಬಡವರ ಮಹಿಳೆಯರ ರೈತರ ಹಾಗೂ ಯುವಕರ ಆಕಾಂಕ್ಷೆಗಳನ್ನು ಅರಿತು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ದುರ್ಬಲ ಆರ್ಥಿಕತೆಯಿಂದ ಭಾರತ ಇಂದು ವಿಶ್ವದ ಐದನೇ ಆರ್ಥಿಕ ಶ್ರದ್ಧೆಯಾಗಿ ಹೊರಹೊಮ್ಮಿದೆ, ಇದು ನರೇಂದ್ರ ಮೋದಿಯವರ ಆಡಳಿತದ ಕೈಗನ್ನಡಿಯಾಗಿದೆ ಎಂದರು.

ಮಂಗಳೂರು ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು ನಗರ ಉತ್ತರ ಮಂಡಲದ ಪ್ರವಾಸವನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರೊಂದಿಗೆ ಎಡಪದವು ಶ್ರೀ ಗೋಪಾಲಕೃಷ್ಣ ದೇವರ ದರ್ಶನ ಪಡೆಯುವ ಮೂಲಕ ಪ್ರಾರಂಭಿಸಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಡಪದವು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಮೀಪ, ಗುರುಪುರ ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ ಕೈಕಂಬ ಕಿನ್ನಿಕಂಬಳದಲ್ಲಿ ರಾಧಾಕೃಷ್ಣ ಸಭಾಭವನದಲ್ಲಿ ಹಾಗೂ ವಿವಿಧ ಮಹಾ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆ ನಡೆಯಿತು.

ಗುರುಪುರ ಗಂಜಿ ಮಠದ ಕೈಗಾರಿಕಾ ಪ್ರಾಂಗಣದಲ್ಲಿರುವ ನೆಕ್ಸಸ್ ಹಾಗೂ ಬಿಗ್ ಬ್ಯಾಗ್ ಕಂಪನಿಗಳಿಗೆ ತೆರಳಿ ಅಲ್ಲಿನ ಸಿಬಂದಿಗಳನ್ನು ಭೇಟಿಯಾದರು.

LEAVE A REPLY

Please enter your comment!
Please enter your name here