Home ಕರಾವಳಿ ಉಳ್ಳಾಲ: ಬೈಕ್ ಡಿಕ್ಕಿ;ಪಾದಚಾರಿ ವ್ಯಕ್ತಿ ಸಾವು !

ಉಳ್ಳಾಲ: ಬೈಕ್ ಡಿಕ್ಕಿ;ಪಾದಚಾರಿ ವ್ಯಕ್ತಿ ಸಾವು !

0

ಉಳ್ಳಾಲ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ತಲಪಾಡಿಯಲ್ಲಿ ನಡೆದಿದೆ.


ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ(49) ಮೃತ ವ್ಯಕ್ತಿ. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ ತಂಗುದಾಣದ ಬಳಿ ಬೇಕರಿ ಇದ್ದು, ಎದುರು ಭಾಗದ ಹೆದ್ದಾರಿ ಬದಿಯಲ್ಲೇ ಮನೆ ಹೊಂದಿದ್ದಾರೆ. ಭಾನುವಾರ ತಲಪಾಡಿ ದೇವಿಪುರದಲ್ಲಿ ರಥೋತ್ಸವ ಇದ್ದ ಹಿನ್ನೆಲೆ ರಾಜೇಶ್ ಅವರು ಮನೆಗೆ ಬಂದಿದ್ದ ನೆಂಟರನ್ನ ಉಪಚರಿಸಿ ಮಧ್ಯಾಹ್ನ ವೇಳೆ ಬೇಕರಿಗೆ ತೆರಳುತ್ತಿದ್ದರು. ಹೆದ್ದಾರಿ ದಾಟಲು ನಿಂತಿದ್ದ ವೇಳೆ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಧಾವಿಸಿ ಬಂದಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಾಜೇಶ್ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಮೃತ ರಾಜೇಶ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಮಗಳು ಪದವಿ ಶಿಕ್ಷಣ ಪಡೆಯುತ್ತಿದ್ದು, ಕಿರಿಯ ಮಗಳು ಎಸ್ಸೆಸೆಲ್ಸಿ ಓದುತ್ತಿದ್ದಾರೆ. ಈಕೆ ಇದೇ ಮಾ.25 ರಂದು ನಡೆಯಲಿರುವ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ರಾಜೇಶ್ ಅವರ ಅಕಾಲಿಕ ಸಾವಿನಿಂದ ಪತ್ನಿ , ಮಕ್ಕಳು ಆಘಾತಕ್ಕೊಳಗಾಗಿದ್ದಾರೆ.

ಮೃತ ರಾಜೇಶ್ ತಲಪಾಡಿ ವೀರಾಂಜನೇಯ ವ್ಯಾಯಾಮ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನೆಗೆ ಕಾರಣನಾದ ಬೈಕ್ ಸವಾರ ಮಹಮ್ಮದ್ ಸೊಹೈಲ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here