Home ತಾಜಾ ಸುದ್ದಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

0

ಗುಜರಾತ್ :ಪ್ರತಿ ವರ್ಷದಂತೆ ಬಿಎಸ್‌ಎಫ್ ಯೋಧರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಗುಜರಾತ್‌ನ ಕಛ್‌ಗೆ ಆಗಮಿಸಿದ್ದಾರೆ. ಬಿಎಸ್ಎಫ್ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.


ಈ ಬಾರಿ ಅವರು ಭಾರತ-ಪಾಕಿಸ್ತಾನ ಗಡಿಗೆ ಸಮೀಪವಿರುವ ಕಛ್‌ನ ಲಕ್ಕಿ ನಾಲಾ ಪ್ರದೇಶದಲ್ಲಿದ್ದಾರೆ. ಬಿಎಸ್‌ಎಫ್‌ನ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಯೋಧರಿಗೆ ಅವರು ಸಿಹಿ ತಿನ್ನಿಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

2014 ರಿಂದ, ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿವಸ್’ ಅಥವಾ ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ.

LEAVE A REPLY

Please enter your comment!
Please enter your name here