Home ಕರಾವಳಿ ‘ಮಿಸ್ ಟೀನ್ ಗ್ಲೋಬಲ್ ವರ್ಲ್ಡ್’ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಈಶಿಕಾ ಶೆಟ್ಟಿ

‘ಮಿಸ್ ಟೀನ್ ಗ್ಲೋಬಲ್ ವರ್ಲ್ಡ್’ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಈಶಿಕಾ ಶೆಟ್ಟಿ

0

ಮಂಗಳೂರು: ದೆಹಲಿಯಲ್ಲಿ ನಡೆದ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024” ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ ಜಯಶಾಲಿಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಒಟ್ಟು 65 ಮಂದಿ ಭಾಗವಹಿಸಿದ್ದು, ರಾಜ್ಯದಿಂದ ಸ್ಪರ್ಧೆಗೆ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ ಶೆಟ್ಟಿ. ಈಶಿಕಾ ಶೆಟ್ಟಿ ಅವರು 2023 ರಲ್ಲಿ “ಮಿಸ್ ಟೀನ್ ಮಂಗಳೂರು” ಕಿರೀಟವನ್ನು ಗೆದ್ದಿದ್ದು, 2023 ರಲ್ಲಿ “ಮಿಸ್ ಟೀನ್ ಕರ್ನಾಟಕ” ಆಗಿ ಆಯ್ಕೆಗೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಿಕಾ ಶೆಟ್ಟಿ ಅವರು, ಚಿಕ್ಕ ವಯಸ್ಸಿನಿಂದಲೇ ಅಭಿನಯ ಹಾಗೂ ಮಾಡೆಲಿಂಗ್‌ ನಲ್ಲಿ ನನಗೆ ತುಂಬಾ ಆಸಕ್ತಿ ಇತ್ತು. ಇದೀಗ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇನ್ನು ಈಶಿಕಾ ಅವರು ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿದ್ದು, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

 

 

LEAVE A REPLY

Please enter your comment!
Please enter your name here