
ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ನ ಎಂಫಾಸಿಸ್ ಬಳಿ ಇರುವ “ಈಝೀ ಆಯುರ್ವೇದ” ಆಸ್ಪತ್ರೆಯಲ್ಲಿ ನಾಳೆ “ಡಿಸೆಂಬರ್ 1” ರಂದು ಉಚಿತ ಆಯುರ್ವೇದ ಶಿಬಿರ ನಡೆಯಲಿದ್ದು,ಕಾಲಿನ ಆಣಿ, ನೆರುಳ್ಳೆ ಮತ್ತು ಚರ್ಮದ ಕೆಡುಗಳಿಗೆ ಚಿಕಿತ್ಸೆ ನೀಡಲಾಗುವುದು, ಈ ಸೌಲಭ್ಯದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.



