Home ಕರಾವಳಿ ಪಣಂಬೂರು: ಸಮುದ್ರ ಪಾಲಾಗಿದ್ದ ಇಬ್ಬರ ಶವ ಪತ್ತೆ- ಮತ್ತೋರ್ವನಿಗಾಗಿ ಶೋಧ..!

ಪಣಂಬೂರು: ಸಮುದ್ರ ಪಾಲಾಗಿದ್ದ ಇಬ್ಬರ ಶವ ಪತ್ತೆ- ಮತ್ತೋರ್ವನಿಗಾಗಿ ಶೋಧ..!

0

ಪಣಂಬೂರು ಬೀಚ್ ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಪತ್ತೆಯಾದ ಮೃತದೇಹವನ್ನು ಬಜಪೆ ಸಮೀಪದ ಪೊರ್ಕೋಡಿ ನಿವಾಸಿ ಖಾಸಗಿ ಕಂಪೆನಿಯ ಡೆಲಿವರಿ ಬಾಯ್‌ ಮಿಲನ್‌ (20) ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಖಾಸಗಿ ಘಟಕದ ಸೂಪರ್‌ ವೈಸರ್‌ ನಾಗರಾಜ್‌ (26) ಎಂದು ಗುರುತಿಸಲಾಗಿದೆ. ಮಿಲನ್‌ ಮತ್ತು ನಾಗರಾಜ್‌ ಅವರ ಶವಗಳು ಬೀಚಿನ ಬ್ರೇಕ್‌ ವಾಟರ್‌ ಬಳಿ ಸಿಕ್ಕಿವೆ.

ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಲಿಖಿತ್‌ (18) ಗಾಗಿ ಶೋಧ ಕಾರ್ಯ ಮುಂದುವರಿದಿದೆ. ರವಿವಾರ ಸಮುದ್ರಕ್ಕಿಳಿದ ಸಂದರ್ಭ ಅಪಾಯಕ್ಕೆ ಸಿಲುಕಿದ್ದ ಇನ್ನೋರ್ವ ಯುವಕ ಪೊರ್ಕೋಡಿ ನಿವಾಸಿ ಮನೋಜ್‌ ಎಂಬವರನ್ನು ಜೀವ ರಕ್ಷಕ ಸಿಬಂದಿ ರಕ್ಷಿಸಿದ್ದರು. ಇದೀಗ ಪಣಂಬೂರು ಬೀಚ್‌ ಬಳಿ ಸಮುದ್ರಕ್ಕೆ ಇಳಿಯ ಬಾರದು ಎಂಬ ಬ್ಯಾನರನ್ನು ಪೊಲೀಸರು ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here