ಮಂಗಳೂರು: ಮಂಗಳೂರಿನಲ್ಲಿ ದೈವ ಪವಾಡ ನಡೆದಿದೆ. ಮಧ್ಯ ರಾತ್ರಿ ಗೆಜ್ಜೆ ಸದ್ದು ಹಾಗು ಬೆಂಕಿಯ ರೂಪದಲ್ಲಿ ದೈವದ ಸಂಚಾರ ಮಾಡಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಂಗಳೂರಿನ ಏಯ್ಯಾಡಿ ಇಂಡಸ್ಟ್ರಿಯಲ್ ಏರಿಯಾದ ಲಿಯೋ ಕ್ರಾಸ್ತಾ ಕಾಂಪೌಂಡ್ ನಲ್ಲಿ ಈ ದೃಶ್ಯ ಕಂಡು ಬಂದಿದೆ.
ಬೆಂಕಿಯ ರೂಪದಲ್ಲಿ ದೈವವನ್ನ ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಗೆ ದೈವ ದರ್ಶನ ನೀಡಿದ್ದು, ಬೆಂಕಿ ರೂಪ ಹಾಗು ಗೆಜ್ಜೆ ಸದ್ದನ್ನ ಮೊಬೈಲ್ ನಲ್ಲಿ ದೀಪು ಶೆಟ್ಟಿಗಾರ್ ರೆಕಾರ್ಡ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ತೀರಾ ಸಂಚಲನಕ್ಕೆ ಕಾರಣವಾಗಿದೆ.
ಊರಿನ ಭಕ್ತರ ಭಕ್ತಿಗೆ ಮೆಚ್ಚಿ ದರ್ಶನ ನೀಡಿತೇ ಶ್ರೀ ರಕ್ತೇಶ್ವರಿ ದೈವ..!
ಲಿಯೋ ಕ್ರಾಸ್ತ ಕಾಂಪೌಂಡ್ ನಲ್ಲಿರುವ ಶ್ರೀ ನಾಗ, ರಕ್ತೇಶ್ವರಿ ಹಾಗು ಪರಿವಾರ ದೈವಗಳ ಸಾನಿಧ್ಯ ಇದೆ. ಊರಿನವರಿಗೆ ತನ್ನ ಇರುವಿಕೆ ತೋರಿಸಲು ರಕ್ತೇಶ್ವರಿ ದೈವ ಮುಂದಾಗಿದೆ ಎಂದು ಜೋತಿಷ್ಯ ಪ್ರಶ್ನೆಯ ಮೂಲಕ ವಿಸ್ಮಯಕಾರಿ ವಿಷಯ ಹೊರ ಬಂದಿದೆ. ಇದೀಗ ಕಲಿಯುಗದಲ್ಲೂ ದೈವ ವಿಸ್ಮಯ ಕಂಡು ಊರಿನವರು ಅಚ್ಚರಿಗೊಳಗಾಗಿದ್ದಾರೆ.
ಅನೇಕ ವರ್ಷಗಳಿಂದ ಪಾಳು ಬಿದಿದ್ದ ದೈವ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯರು ಮುಂದಾಗಿದ್ದು ಈ ಕ್ಷೇತ್ರದ ಜಿರ್ಣೋದ್ಧಾರಕ್ಕೆ ಮುಂದಾದ ಬಳಿಕ ವಿಸ್ಮಯಕಾರಿ ಘಟನೆ ನಡೆದಿದೆ.
ದಿನಂಪ್ರತಿ ಗೆಜ್ಜೆನಾದ, ದೈವದ ಓಡಾಟದ ಸೂಚನೆ ನೀಡುತ್ತಿದ್ದು, ಸಮೀಪದ ಮರದಲ್ಲಿ ಅಡಕವಾಗಿದ್ದಾಳೆ ಶ್ರೀ ರಕ್ತೇಶ್ವರಿದ್ದಾಳೆ ಎಂದು ನಂಬಿ ಮರದಲ್ಲೇ ಆರಾಧನೆ, ಪ್ರಕೃತಿ ಆರಾಧನೆಗೆ ಭಕ್ತರು ಮುಂದಾಗಿದ್ದರು ಇದೀಗ ಭಕ್ತರ ನಿಷ್ಕಲ್ಮಶ ಭಕ್ತಿ ಶ್ರದ್ಧೆಗೆ ಒಲಿದಿದ್ದಾಳೆ ರಕ್ತೇಶ್ವರಿ.