ಮುಲ್ಕಿ: ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುಲ್ಕಿ ಸಮೀಪದ ಕೊಲ್ಲೂರು ಪದವು ನಿವಾಸಿ ಆನಂದ ಕೊಟ್ಯಾನ್ (65) ಎಂಬವರ ಮೃತದೇಹ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಾಹಿತಿ ಪಡೆದ ತಕ್ಷಣ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಸಿಫ್ ಆಪದ್ಬಾಂಧವ ಅವರ ಸಹಕಾರದೊಂದಿಗೆ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು. ಕಾರ್ಯಚರಣೆಯಲ್ಲಿ ಮುಲ್ಕಿ ಪೊಲೀಸರು, ಸಮಾಜಸೇವಕ ಅದ್ದಿ ಬೊಳ್ಳೂರು, ಮುನೀರ್ ಮಲ್ಲೂರು ಮತ್ತು ಸ್ಥಳೀಯರು ಸಹಕರಿಸಿದರು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸಿಫ್ ಆಪತ್ಬಾಂಧವ ಆಂಬುಲೆನ್ಸ್ ಮೂಲಕ ಶವವನ್ನು ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.