ಮಲ್ಪೆ: ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕೆಯ ಬೋಟ್ ಒಂದನ್ನು 25 ಮಂದಿಯ ತಂಡವೊಂದು ಅಪಹರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದೋಚಿದ ಘಟನೆ ನಡೆದಿದೆ.
ಬೋಟ್ ನ 7 ಮಂದಿ ಮೀನುಗಾರರನ್ನು ಒತ್ತೆಯಾಳಾಗಿ ಇರಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ:
ಮಲ್ಪೆ:ಪಿರ್ಯಾದಿ ಚೇತನ್ ಸಾಲಿಯಾನ್ (42) ಕೊಡವೂರು ಗ್ರಾಮ ಮಲ್ಪೆ ಉಡುಪಿ ಇವರು IND KA 02 MM 5572 ನಂಬ್ರ ಕೃಷ್ಣನಂದನ ಎಂಬ ಲೈಲಾನ್ ಬೋಟ್ ಹೊಂದಿದ್ದು, ಅದರಲ್ಲಿ ದಿನಾಂಕ 19/02/2024 ರಂದು ಆಳ ಸಮುದ್ರಕ್ಕೆ ಮೀನು ಹಿಡಿಯಲು 1) ನಾಗರಾಜ್ ಹರಿಕಾಂತ 2) ನಾಗರಾಜ್ ಹೆಚ್. ಹರಿಕಾಂತ 3) ಅರುಣ್ ಹರಿಕಾಂತ ಅಂಕೋಲ 4) ಅಶೋಕ ಕುಮುಟ 5) ಕಾರ್ತಿಕ್ ಹರಿಕಾಂತ ಮಂಕಿ 6) ಚಂದ್ರಕಾಂತ ಹರಿಕಾಂತ ಉಪ್ಪುಂದ 7) ಸುಬ್ರಮಣ್ಯ ಖಾರ್ವಿ ರವರು ತೆರಳಿರುತ್ತಾರೆ.
ದಿನಾಂಕ 27/02/2024 ರಂದು ಬೆಳಗ್ಗೆ 6.00 ಗಂಟೆಗೆ ಪಿರ್ಯಾದಿದಾರರಿಗೆ ನಾಗರಾಜ್ ಹರಿಕಾಂತ ಎಂಬವರು ಪೋನ್ ಕರೆ ಮಾಡಿ ದಿನಾಂಕ 26/02/2024 ಅಥವಾ 27/02/2024 ರ ರಾತ್ರಿ ವೆಳೆಗೆ ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವಾಗ ನಮ್ಮ ಬೋಟ್ ನ ಬಲೆ ಫ್ಯಾನ್ ಗೆ ಬಿದ್ದ ಕಾರಣ ಬೋಟ್ ಬಂದ್ ಆಗಿ ನಿಂತಿದ್ದು, ಈ ಸಮಯದಲ್ಲಿ ಸುಮಾರು 25 ಜನ ಅಪಹರಣಕಾರರು ಓಮ್ಮಿಂದೊಮ್ಮೆಲೆ ಅಕ್ರಮಣ ಮಾಡಿ ಬೋಟ್ ನ್ನು ತೀರಕ್ಕೆ ಎಳೆದುಕೊಂಡು ಹೋಗಿ ನಮ್ಮನ್ನು ಅಪಹರಿಸಿ ಬೋಟ್ ನಲ್ಲಿದ್ದ ಸುಮಾರು 8 ಲಕ್ಷ ಮೌಲ್ಯದ ಮೀನು ಮತ್ತು ಬೋಟ್ ಗೆ ತುಂಬಿಸಿದ 5,76,700/- ಮೌಲ್ಯದ 7,500 ಲೀಟರ್ ಡೀಸೆಲ್ ದೋಚಿರುತ್ತಾರೆ.
ಇಷ್ಟೇ ಅಲ್ಲದೇ ಬೋಟ್ ನಲ್ಲಿದ 7 ಜನ ಒತ್ತೆಯಾಳಾಗಿ ಇರಿಸಿಕೊಂಡಿರುತ್ತಾರೆ. ಎಂದು ತಿಳಿಸಿದಂತೆ ಪಿರ್ಯಾದಿದಾರರು ಉಳಿದ ಮೀನುಗಾರರಿಗೆ ಫೋನ್ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದಿದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿ, ಮೀನುಗಾರರನ್ನು ಅಪರಿಚಿತ ಅಪಹರಣಕಾರರು ಬಂಧನದಲ್ಲಿರಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂದೆ ನೀಡುತ್ತಿದ್ದಾರೆ ಎಂದು ಪಿರ್ಯಾದಿದಾರರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 31/2024 ಕಲಂ 395, 365, 342 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.