ಉಡುಪಿ: ಬಾಕ್ಸಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಪ್ರತಿಭೆ ವಿರಾಜ್ ಮೆಂಡನ್ ನೇಣಿಗೆ ಶರಣಾಗಿದ್ದಾರೆ. ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಕುಟುಂಬದಲ್ಲಿ ಜನಿಸಿರುವ ವಿರಾಜ್ ಇಂದು ಮುಂಜಾನೆ ಮನೆಯವರು ಮೀನುಗಾರಿಕೆಗೆ ತೆರಳಿದ ವೇಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ನೇಣಿಗೆ ಶರಣಾಗಿದ್ದಾರೆ.
28 ವರ್ಷದ ವಿರಾಜ್, ಮಲ್ಪೆ ಪಡುಕರೆಯ ಭಾಸ್ಕರ್ ಕುಂದರ್ ಹಾಗೂ ಮೋಹಿನಿ ಮೆಂಡನ್ ಅವರ ಪುತ್ರ. ಗೆಳೆಯರು ನೀಡಿದ ಸಲಹೆ ಮೇರೆಗೆ ಬಾಕ್ಸಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಿರಾಜ್, ಕಳೆದ ಎಂಟು ವರ್ಷಗಳಿಂದ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಭಾರತದಲ್ಲಿ ಪ್ರೊ ಬಾಕ್ಸಿಂಗ್‌ನಲ್ಲಿ 5ನೇ ರ್ಯಾಂಕ್ ಹೊಂದಿರುವ ವಿರಾಜ್ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ ಹೊಂದಿದ್ದರು. ಆದರೆ ದಿಢೀರ್ ಆತ್ಮಹತ್ಯೆಯ ನಿರ್ಧಾರ ಮಾಡಿರುವುದು ಆಶ್ಚರ್ಯಕ್ಕೀಡುಮಾಡಿದೆ.