Home ಕರಾವಳಿ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 12 ರಿಂದ 16 ವರಗೆ ಕುಂಭ ಮಹೋತ್ಸವ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 12 ರಿಂದ 16 ವರಗೆ ಕುಂಭ ಮಹೋತ್ಸವ

0

ಮಂಗಳೂರು : ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಲಶೇಖರದ ಶ್ರೀ ವೀರನಾರಾಯಣ ದೇವರ ವರ್ಷಾವಧಿ ಜಾತ್ರೋತ್ಸವ “ಕುಂಭ ಮಹೋತ್ಸವ” ಫೆಬ್ರವರಿ 12 ರಿಂದ 16ರ ತನಕ ಸಂಭ್ರಮದಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ ಮಾತನಾಡಿ, ಶ್ರೀ ಅನಂತ ಉಪಾದ್ಯಾಯ ಮತ್ತು ಶ್ರೀ ಹರಿ ಉಪಾದ್ಯಾಯರು ತಂತ್ರಿಯವರ ನೇತೃತ್ವದಲ್ಲಿ, ಪರಮಪೂಜ್ಯರಾದ ಮಾಣಿಲ ಶ್ರೀಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕರಾದ ಜನಾರ್ದನ ಭಟ್ ಅವರ ಉಪಸ್ಥಿತಿಯಲ್ಲಿ ವೈದಿಕ, ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳಲಿದೆ. ಫೆಬ್ರವರಿ 12 ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಮಾಣಿಲ ಹಾಗೂ ಶ್ರೀ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆನೆಗುಂದಿ ಮಹಾ ಸಂಸ್ಥಾನಮ್ ಕಟಪಾಡಿ ಇವರುಗಳು ಆಶೀರ್ವಚನ ನೀಡಲಿದ್ದಾರೆ. ವಿವಿಧ ಗಣ್ಯರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ದಿನಾಂಕ 13-2-2024 ರಂದು ದೇವರ ಬಲಿ ಹೊರಟು ಮಹಾರಥೋತ್ಸವ ನಡೆಯಲಿದೆ. ನಂತರ ಪಲ್ಲಪೂಜೆ, ಬಟ್ಟಲು ಕಾಣಿಕೆ ಯಾಗಿ ಮಹಾಅನ್ನಸಂತರ್ಪಣೆ ಜರಗಲಿದೆ. ರಾತ್ರಿ ರಂಗ ಪೂಜೆ, ಬಯನ ಬಲಿ ಉತ್ಸವ, ರಥೋತ್ಸವ, ಪಲ್ಲಕ್ಕಿ ಸೇವೆ, ವಸಂತ ಕಟ್ಟೆ ಪೂಜೆ ನಡೆಯಲಿದೆ. ದಿನಾಂಕ 14-2-2024 ಬೆಳಗ್ಗೆ ಶ್ರೀ ವೀರನಾರಾಯಣ ದೇವರಿಗೆ ಲಕ್ಷ ತುಳಸಿ ಅರ್ಚನೆ, ತುಲಾಭಾರ ಸೇವೆ ಜರಗಲಿದೆ. ಸಂಜೆ ಶ್ರೀ ಕ್ಷೇತ್ರದ ರಾಜಂಗಣದಲ್ಲಿ ಸಾಂಸ್ಕೃತಿಕ ತಂಡಗಳ ಪ್ರದರ್ಶನ ನಡೆದು ಶ್ರೀ ದೇವರ ಪೇಟೆ ಸವಾರಿ ಬಲಿ ಉತ್ಸವವು ನಡೆಯಲಿದೆ. ದಿನಾಂಕ 15-2-2024 ರಂದು ಬೆಳಗ್ಗೆ ಲಕ್ಷ್ಮೀ ನಾರಾಯಣ ಹೃದಯ ಹೋಮ, ಮಹಾಪೂಜೆ ನಡೆಯಲಿದೆ. ಸಂಜೆ ದಾಸ ಸಂಕೀರ್ತನೆ, ಬಲಿ ಉತ್ಸವ, ರಥೋತ್ಸವ, ಬಟ್ಟಲು ಕಾಣಿಕೆ ಜರಗಲಿದೆ. ದಿನಾಂಕ 16-2-2024 ರಂದು ಬೆಳಗ್ಗೆ ಭಜನೆ, ಉತ್ಸವದ ಸಂಪ್ರೊಕ್ಷಣೆ, ಮಹಾಪ್ರಸಾದ ವಿತರಣೆ, ಓಕುಳಿ ಸಂಭ್ರಮದ ಪ್ರಾರಂಭೋತ್ಸವ, ಮಹಾಪೂಜೆ ಜರಗಲಿದೆ. ಪ್ರತಿದಿನ ಮಧ್ಯಾಹ್ನ, ರಾತ್ರಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಒಟ್ಟು ಕಾರ್ಯಕ್ರಮಗಳಲ್ಲಿ ಸುಮಾರು 15000 ಕ್ಕೂ ಮಿಕ್ಕಿದ ಭಕ್ತರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಸಂಪೂರ್ಣವಾಗಿ ನವೀಕರಣಗೊಂಡು ಸಂಭ್ರಮದಿಂದ ಬ್ರಹ್ಮಕಲಶೋತ್ಸವವನ್ನು ಆಚರಿಸಿರುವ ಶ್ರೀ ವೀರನಾರಾಯಣ ದೇವರಿಗೆ ಮತ್ತು ಉತ್ಸವ ಮೂರ್ತಿಗೆ ಈ ಬಾರಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವರ್ಣ ಕವಚ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್, ಮಯೂರ್ ಉಳ್ಳಾಲ್, ಗಿರಿಧರ ಜೆ.ಮೂಲ್ಯ, ಸುಂದರ್ ಕುಲಾಲ್ ಶಕ್ತಿನಗರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here