ಪುತ್ತೂರು : ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಕೆವೈಸಿ ಅಪ್ಡೇಟಿಗೆಂದು ಒಟಿಪಿ ಪಡೆದು ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರಶೇಖರ ಭಟ್ (62) ಎಂಬವರೇ ಒಟಿಪಿ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ. ಮಂಗಳವಾರ (ಫೆ 6) ಚಂದ್ರಶೇಖರ ಭಟ್ ಅವರ ಮೊಬೈಲಿಗೆ ಕೆವೈಸಿ ಅಪ್ಡೇಟ್ ಮಾಡುವ ಕುರಿತು ಸಂದೇಶ ಬಂದಿದ್ದು, ಸಂದೇಶದಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಅವರು ಕರೆ ಮಾಡಿದಾಗ ನಿಮ್ಮ ಖಾತೆ ಬ್ಲಾಕ್ ಆಗಿದೆ. ಒಟಿಪಿ ನೀಡುವಂತೆ ತಿಳಿಸಿದ ಮೇರೆಗೆ ಭಟ್ ಅವರು ಒಟಿಪಿ ನೀಡಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಿಂದ 1.73 ಲಕ್ಷ ರೂಪಾಯಿ ಹಣ ಕಡಿತಗೊಂಡಿದೆ.ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 24-2024 ಕಲಂ: IPC 1860 ಕಲಂ-417,419,420 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Home ಕರಾವಳಿ ಎಚ್ಚರ…! ಎಚ್ಚರ…! ಪುತ್ತೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಕೆವೈಸಿ ಅಪ್ಡೇಟಿಗೆಂದು ಒಟಿಪಿ ಪಡೆದು ಲಕ್ಷಾಂತರ...