Home ಕರಾವಳಿ ಮಂಗಳೂರು: ರಸ್ತೆ ಬದಿ ಡ್ರಗ್ಸ್ ಮಾರಾಟಕ್ಕೆ ಯತ್ನ ಇಬ್ಬರು ಅರೆಸ್ಟ್..!

ಮಂಗಳೂರು: ರಸ್ತೆ ಬದಿ ಡ್ರಗ್ಸ್ ಮಾರಾಟಕ್ಕೆ ಯತ್ನ ಇಬ್ಬರು ಅರೆಸ್ಟ್..!

0
ಮಂಗಳೂರು ನಗರದ ಬಲ್ಮಠ ನ್ಯೂ ರೋಡ್‌ ಬಳಿ ರಾತ್ರಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳು ಅತ್ತಾವರದ ಆದಿತ್ಯ ಕೆ. (29) ಮತ್ತು ಅಡ್ಯಾರ್‌ಪದವಿನ ರೋಹನ್‌ ಸಿಕ್ವೇರ(33) ಎಂದು ತಿಳಿಯಲಾಗಿದೆ.
ಅವರಿಂದ ಸುಮಾರು 50 ಸಾವಿ ರ ರೂ. ಮೌಲ್ಯದ 27 ಗ್ರಾಂ ಹೈಡೋವಿಡ್‌ ಗಾಂಜಾ, ಸುಮಾರು 1 ಲಕ್ಷ ರೂ. ಮೌಲ್ಯದ 2 ಕೆಜಿ 95 ಗ್ರಾಂ ಗಾಂಜಾ, 16,800 ರೂ. ಮೌಲ್ಯದ ಎಲ್‌ಎಸ್‌ಡಿ ಸ್ಟ್ಯಾಂಪ್‌, 2 ಮೊಬೈಲ್‌, ಕಾರು ವಶಪಡಿಸಿಕೊಂಡಿದ್ದಾರೆ.
ಬಂದರು ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here