Home ಕರಾವಳಿ ಬಿಗ್ ಬಾಸ್‌ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ

ಬಿಗ್ ಬಾಸ್‌ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ

0

ಕಡಬ: ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಕಡಬದ ಯುವಕ ಝೈನುಲ್ ಆಬಿದ್ ಎಂಬ ಯುವಕ ಅರ್ಧ ಗಡ್ಡ, ಮೀಸೆ ತೆಗೆದು ವೈರಲ್ ಆಗಿದ್ದಾನೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್, ಈ ಸಲದ ಬಿಗ್ ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರಲಿದ್ದಾರೆ. ಪ್ರತಾಪ್ ಏನಾದರೂ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ವೀಡಿಯೋ ಷೇರ್ ಮಾಡಿದ್ದನು. ಜೊತೆಗೆ ಹಾಗಾದರೆ ಹಸಿ ಮೆಣಸಿನಕಾಯಿ ತಿನ್ನುವುದಾಗಿಯೂ ಮತ್ತೊಂದು ವೀಡಿಯೋ ಹರಿಯಬಿಟ್ಟಿದ್ದನು.

ಕೊನೆಗೂ ಬಿಗ್ ಬಾಸ್‌ನಲ್ಲಿ ಕಾರ್ತಿಕ್ ವಿನ್ನರ್ ಆಗಿ ಹೊರ ಬಂದಿದ್ದು, ಪ್ರತಾಪ್ ರನ್ನರ್ ಅಪ್ ಅಷ್ಟೇ ಆಗಿದ್ದಾರೆ. ಫಲಿತಾಂಶ ಹೊರ ಬರುತ್ತಲೇ ಆಬಿದ್ ತಾನು ಹಾಕಿದ ಚಾಲೆಂಜ್‌ನಂತೆ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ವೀಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here