ಪ್ರತಿಷ್ಠಿತ ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘ (ರಿ) ಸುಬ್ರಹ್ಮಣ್ಯ. ಇದರ 13 ನೇ ವರ್ಷದ ಆಮಂತ್ರಣ ಪತ್ರಿಕೆ ಇಂದು ಬಿಡುಗಡೆಗೊಳಿಸಲಾಯಿತು.
ಕ್ಷೇತ್ರಾಧಿಪತಿ ಸುಬ್ರಹ್ಮಣ್ಯ ದೇವರು ಹಾಗು ಪರಿವಾರ ದೇವರಲ್ಲಿ ಆಮಂತ್ರಣ ಪತ್ರಿಕೆ ನೀಡಿ ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು.
ಸಂಘದ ಗೌರವಾಧ್ಯಕ್ಷರಾದ ಉಮೇಶ್ ಕೆ.ಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಮೊದಲು ಶ್ರೀ ವನದುರ್ಗ ದೇವಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ನೆರವೇರಿಸಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು.
ತದನಂತರ ದೇವರಗದ್ದೆಯಲ್ಲಿರುವ ನಾಗಬ್ರಹ್ಮ ಶ್ರೀ ಆದಿ ಮೊಗೆರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಪ್ರಾರ್ಥಿಸಿ ಆಮಂತ್ರಣ ಪತ್ರಿಕೆ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಮೊತ್ತ ಮೊದಲ ಆಮಂತ್ರಣ ಪತ್ರಿಕೆಯನ್ನು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ನೀಡಲಾಯಿತು.
ದಿನಾಂಕ 07-02-24ನೇ ಬುಧವಾರ ಬೆಳಗ್ಗೆ 10-00 ಗಂಟೆಯಿಂದ ವನದುರ್ಗ ದೇವಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಭಜನಾ ಕಾರ್ಯಕ್ರಮ ಹಾಗು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ಗಂಟೆಯಿಂದ ಸವಾರಿ ಮಂಟಪದ ಬಳಿ ಇರುವ ಅಭಯ ಆಂಜನೇಯ ದೇವಾಲಯ ವಠಾರದಲ್ಲಿ ಸಭಾ ಕಾರ್ಯಕ್ರಮ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 8-30 ರಿಂದ ಪೂಜಾ ಪ್ರಭಾತ್ ಹೊಸಬೆಟ್ಟು ಉಡುಪಿ ಇವರ ತಂಡದಿಂದ ಡಾನ್ಸ್ ಧಮಾಕಾ.
ರಾತ್ರಿ 10-00 ಗಂಟೆಯಿಂದ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮುಲ್ಕಿ. ಇವರಿಂದ ತುಳುನಾಡ ಕಾರ್ನಿಕ ದೈವ ಕೊರಗಜ್ಜನ ಜೀವನ ಚರಿತ್ರೆಯ ಕಥಾವಸ್ತು ಹೊಂದಿರುವ ಸೂಪರ್ ಹಿಟ್ ತುಳು ಯಕ್ಷಗಾನ ಅಜ್ಜ..ಅಜ್ಜ. ಕೊರಗಜ್ಜ ಯಕ್ಷಗಾನ ಪ್ರದರ್ಶನ ನಡೆಯಲಿದೆ.