Home ಕರಾವಳಿ ಮಂಗಳೂರು: ಕದ್ರಿಯಲ್ಲಿ ಉದ್ಘಾಟನೆಗೊಂಡ ಅಪ್ಸರಾ ಐಸ್ ಕ್ರೀಮ್ಸ್ ಮಳಿಗೆ

ಮಂಗಳೂರು: ಕದ್ರಿಯಲ್ಲಿ ಉದ್ಘಾಟನೆಗೊಂಡ ಅಪ್ಸರಾ ಐಸ್ ಕ್ರೀಮ್ಸ್ ಮಳಿಗೆ

0

ಮಂಗಳೂರು: 50ಕ್ಕೂ ಅಧಿಕ ಐಸ್ ಕ್ರೀಂಗಳನ್ನು ಹೊಂದಿರುವ ಅಪ್ಸರಾ ಐಸ್ ಕ್ರೀಮ್ಸ್ ನ ಮೊದಲ ಮಳಿಗೆಯನ್ನು ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಗಣೇಶ್ ಕಾಮತ್ ಅವರು ಇಂದು(ಸೆ.29) ಮಂಗಳೂರಿನ ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿಯ ಸಿಟಿ ಗೇಟ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿದರು.


ಅಪ್ಸರಾ ಐಸ್ ಕ್ರೀಮ್ಸ್ 1971 ರಿಂದ ಮುಂಬೈನ ಅತ್ಯಂತ ಹಳೆಯ ಐಸ್ ಕ್ರೀಮ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಮಂಗಳೂರು ಮಳಿಗೆಯು ಮಂಗಳೂರಿನ ಕಾಮಾಕ್ಷಿ ಗ್ರೂಪ್ನ ಫ್ರ್ಯಾಂಚೈಸ್ ಆಗಿದೆ. ಗಣೇಶ್ ಕಾಮತ್ ಮಾತನಾಡಿ, ಮಂಗಳೂರನ್ನು ಭಾರತದ ಐಸ್ ಕ್ರೀಮ್ ರಾಜಧಾನಿ ಎಂದು ಕರೆಯಲಾಗುತ್ತದೆ ಮತ್ತು ನಗರದಲ್ಲಿ ಅಪ್ಸರಾ ಐಸ್ ಕ್ರೀಮ್ಸ್ ಮೊದಲ ಮಳಿಗೆಯನ್ನು ತೆರೆದಿರುವುದು ಮಂಗಳೂರಿನ ಕ್ಯಾಪ್ ಗೆ ಮತ್ತೊಂದು ಗರಿಯನ್ನು ಸೇರಿಸಿದೆ. ವರ್ಷವಿಡೀ ಎಲ್ಲರೂ ಇಷ್ಟಪಡುವ ಐಸ್ ಕ್ರೀಮ್ ತಿನ್ನಲು ಯಾವುದೇ ವಯಸ್ಸಿನ ಮಿತಿ ಅಥವಾ ದಿನದಲ್ಲಿ ಯಾವುದೇ ನಿರ್ದಿಷ್ಟ ಸಮಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಂಗಳೂರು ವಾಣಿಜ್ಯವಾಗಿ, ಆರ್ಥಿಕವಾಗಿ ಬೆಳೆದಿದೆ ಮತ್ತು ಮುಂದಿನ 5 ವರ್ಷಗಳಲ್ಲಿ ಇದು ಪ್ರಮುಖ ಕೈಗಾರಿಕಾ ಕೇಂದ್ರವಾಗಲಿದೆ. ಮುಂಬೈನ ಅಪ್ಸರಾ ಐಸ್ ಕ್ರೀಮ್ಸ್, ಮಂಗಳೂರು ಫ್ರಾಂಚೈಸಿಯನ್ನು ಮಂಗಳೂರಿನ ಜನರಿಗೆ ತೆಗೆದುಕೊಂಡು ಹೋಗಿ ಪಾನಿ ಪುರಿ, ಪೇರಳೆ ಗ್ಲೋರಿ, ಹುಣಸೆ ಟ್ವಿಸ್ಟ್ ಮುಂತಾದ ಅದ್ಭುತ ಮತ್ತು ವಿಶಿಷ್ಟ ರುಚಿಯ ಐಸ್ ಕ್ರೀಮ್ಗಳನ್ನು ಮಂಗಳೂರಿನ ಜನರಿಗೆ ಒದಗಿಸಿದ್ದಕ್ಕಾಗಿ ಅವರು ಮಾನೆಲ್ ಶ್ರೀಕಾಂತ್ ನಾಯಕ್ ಮತ್ತು ಕಾಮಾಕ್ಷಿ ಗ್ರೂಪ್ ಅನ್ನು ಅಭಿನಂದಿಸಿದರು. ಇನ್ನು ಕಾಮಾಕ್ಷಿ ಗ್ರೂಪ್ ನ ಪಾಲುದಾರ ಮನೆಲ್ ಶ್ರೀಕಾಂತ್ ನಾಯಕ್ ಮಾತನಾಡಿ, ಉದ್ಘಾಟನಾ ಕೊಡುಗೆಯಾಗಿ ಇಂದಿನಿಂದ ಒಂದು ವಾರದವರೆಗೆ ಎಲ್ಲಾ ಸ್ಕೂಪ್ ಐಸ್ ಕ್ರೀಮ್ ಗಳ ಮೇಲೆ 50% ರಿಯಾಯಿತಿ ಇರುತ್ತದೆ. ಈ ಮಳಿಗೆಯು ಬೆಳಿಗ್ಗೆ 10 ರಿಂದ ಮಧ್ಯರಾತ್ರಿ 1ಗಂಟೆವರೆಗೆ ಈ ಮಳಿಗೆ ತೆರೆದಿರುತ್ತದೆ ಎಂದರು. ಈ ಮಳಿಗೆ ಉದ್ಘಾಟನೆ ವೇಳೆ ಕಾಮಾಕ್ಷಿ ಸಮೂಹದ ಪಾಲುದಾರರಾದ ಮನೆಲ್ ಮಾಧವ್ ನಾಯಕ್, ನಿವೇದಿತಾ ನಾಯಕ್ ಮತ್ತು ನಿಯಾತಿ ನಾಯಕ್ ಉಪಸ್ಥಿತರಿದ್ದರು. ಅಪ್ಸರಾ ಐಸ್ ಕ್ರೀಮ್ಸ್  ಅಪ್ಸರಾ ಐಸ್ ಕ್ರೀಮ್ಸ್ 1971ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ಪ್ರಾರಂಭವಾಗಿತ್ತು. ಇಲ್ಲಿ ಪ್ರಮುಖ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಬಳಿಕ ಹಲವು ವರ್ಷಗಳ ಕಾಲ ಅಂಗಡಿಗಳಿಗೆ ಅಪ್ಸರಾ ಐಸ್ ಕ್ರೀಮ್ಸ್ ಮಾರಾಟ ಮಾಡುತ್ತ, ಮದುವೆಗಳು, ಇತರ ಕಾರ್ಯಕ್ರಮಗಳಿಗೆ ಸಾಕಷ್ಟು ತಮ್ಮ ಮಾರಾಟವನ್ನು ಪೂರೈಸಿತು. ಬಳಿಕ ತನ್ನ ವಾಣಿಜ್ಯ ವ್ಯಾಪ್ತಿ ವಿಸ್ತರಿಸುತ್ತದ್ದಂತೆ 2014ರ ಬಳಿಕ ಮುಂಬೈನ ಪ್ರಮುಖ ಸ್ಥಳಗಳಾದ ಪೊವಾಯಿ, ಅಂಧೇರಿ, ಲೋಖಂಡ್ವಾಲಾ ಮತ್ತು ಕಿಂಗ್ ಸರ್ಕಲ್ನಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ಪ್ರಾರಂಭಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು.

LEAVE A REPLY

Please enter your comment!
Please enter your name here