ಉಡುಪಿ : ಭಾರತೀಯ ಸನಾತನ ದಿವ್ಯಾಅತಿದಿವ್ಯ ಕ್ಷೇತ್ರವಾದ ಉಡುಪಿಯಲ್ಲಿ ಮೊನ್ನೆ ನವ ನೂತನ ಸಂಕೀರ್ತನ ಮಂದಿರ ” ಅಭಿರಾಮ ಧಾಮ ” ಲೋಕಾರ್ಪಣೆ ಗೊಂಡಿದೆ. ಬೆಂಗಳೂರಿನ ಹಿರಿಯ ಪತ್ರಕರ್ತರೂ , ಸಾಂಸ್ಕ್ರತಿಕ ಚಿಂತಕರೂ ಆದ ಪರ್ಲತ್ತಾಯ
ಡಾ. ಸುದರ್ಶನ ಭಾರತೀಯ ಉರುಫ್ ವೆಂಕಟ ವಿಠ್ಠಲ ಸುಗುಣದಾಸರು ತಮ್ಮ ಸುಪುತ್ರ ಸ್ವರಸಾಮ್ರಾಟ್ – ವಿದ್ವಾನ್ , ಅಭಿರಾಮ್ ಭರತವಂಶಿ ಯವರ ಸಂಗೀತ ಸಾಧನೆಯನ್ನು ಅಮರಗೊಳಿಸುವಲ್ಲಿ ಇದು ಮಹತ್ತರ ಹೆಜ್ಜೆ ಎಂದು ‘ಅಭಿರಾಮಧಾಮ’ವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದ ಕಾಣಿಯೂರು ಮಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ವಿದ್ಯಾ ವಲ್ಲಭ ತೀರ್ಥರು ಅಶೀರ್ವದಿಸಿದರು. ಸುಮಾರು ಇನ್ನೂರು -ಮುನ್ನೂರು ಮಂದಿ ಭಗವದ್ಭಕ್ತರು , ಭಜನಾಕಾರರು ಈ ಸುಸಂಧರ್ಭದಲ್ಲಿ ಪಾರಾಯಣ , ಭಜನೆಗಳಲ್ಲಿ ‘ಅಭಿರಾಮಧಾಮ’ದಲ್ಲಿ ತೊಡಗಿಕೊಂಡರು. ಸಮಾಜದ ಎಲ್ಲಾ ವರ್ಗದ 8 –18 ವರ್ಷದ ಮಕ್ಕಳಿಗೆ ಸಂಗೀತ –ನೃತ್ಯ , ಗಮಕ , ಭಜನೆ , ಯೋಗ , ಧ್ಯಾನ , ಗೀತಾಭಿಯಾನ ಸುಜ್ನ್ಯಾನ ದೊರಕಿಸಿ ಕೊಡುವುದೇ ಅಭಿರಾಮ ಧಾಮದ ಧ್ಯೇಯೋದ್ದೇಶ ಎಂದು ಸಂಸ್ಥಾಪಕ – ಕಾರ್ಯದರ್ಶಿ ವಿದುಷಿ . ಸುಶ್ಮಾ ಸುದರ್ಶನ್ ವಿವರಿಸಿದರು.
ಸಂಜೆಗೆ ನೂರಾರು ಭಕ್ತರಿಂದ ಶ್ರೀಕೃಷ್ಣ ನಾಮ ಸಂಕೀರ್ತನೆ ನಡೆಸಲಾಯಿತು ಹಾಗೂ ಕಾರ್ತೀಕ ಮಾಸದ ಶ್ರೀ ದಾಮೋದರ ಆರತಿಯನ್ನೂ ಬೆಳಗಲಾಯಿತು. ಉಡುಪಿಯ ಚಿಣ್ಣರಿಗೆ , ಯುವ ಜನತೆಗೆ ಸನಾತನ ಸಂಸ್ಕೃತಿಯನ್ನಪ್ಪಿ ಕೊಳ್ಳಲು ಗುಂಡಿಬೈಲಿನಲ್ಲಿರುವ
ಸ್ವರಸಾಮ್ರಾಟ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಹಾಯಕಾರೀಸಂಘಟನೆಯನ್ನು ಮಾಡುತ್ತೆಂದೂ ಅಭಿರಾಮ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಸುಗುಣದಾಸರು ರೂವಾರಿಗೆ ತಿಳಿಸಿದರು .