ಮಂಗಳೂರು : ಮುಲ್ಕಿ ಪೋಲಿಸ್ ಠಾಣೆ ವ್ಯಾಪ್ತಿಯ ಅಪರಾದ ಕ್ರಮ ಸಂಖ್ಯೆ 53/2023 ರಂತೆ ಯತಿನ್ ಕುಮಾರ್,ರಾಜೇಶ್ ಮತ್ತು ಇತರರ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ , ವಾರೆಂಟ್ ಮೇಲೆ ನ್ಯಾಯಾಲಕ್ಕೆ ಹಾಜರಾದ ಹಿನ್ನಲೆಯಲ್ಲಿ ಆರೋಪಿಗಳಾದ ಯತಿನ್ ಕುಮಾರ್ ಮತ್ತು ರಾಜೇಶ್‌ರ ಜಾಮೀನನ್ನು ರದ್ಧತಿ ಮಾಡಿ ಮೂಡಬಿದ್ರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯವು ನ್ಯಾಯಾಂಗ ಬಂದನಕ್ಕೆ ನೀಡಿದ ಆದೇಶವನ್ನು ಪ್ರಶ್ನಿಸಿ ಆರೋಪಿಗಳಿಬ್ಬರು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ಪರಿಷ್ಕರಣೆ ಅರ್ಜಿಯ ಮುಖಾ೦ತರ ಸದ್ರಿ ಮೂಡಬಿದ್ರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶವನ್ನು ರದ್ದುಕೋರಿ ಕದ ತಟ್ಟಿದ್ದು. ಅರ್ಜಿಯನ್ನು ಪರಿಶೀಲಿಸಿ ದೂರುದಾರರ ಪರ ಮತ್ತು ವಿರೋದ ವಾದವನ್ನು ಆಲಿಸಿದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಹೊಂದಿದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರಾದ ಮಲ್ಲಿಕಾರ್ಜುನ ಸ್ಟಾಮಿ ಹೆಚ್.ಎಸ್ ರವರು. ಮೂಡಬಿದ್ರಿಯ ಜೆ.ಎಮ್. ಎಪ್.ಸಿ ನ್ಯಾಯಾಲವು ಹೊರಡಿಸಿದ್ದ ಜಾಮೀನು ರದ್ದತಿ ಆದೇಶವನ್ನು ತಡೆ ಹಿಡಿದು. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಸಲ್ಲಿಸಿದ ಮದ್ಯಂತರ ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿತು, ದೂರುದಾರರಪರ ಯುವ ನ್ಯಾಯಾವಾದಿ ಶಿವಾನಂದ ಎಮ್. ವಿಟ್ಲ ಇವರು ವಾದ ಮಂಡಿಸಿದ್ದರು.
Home ಕರಾವಳಿ ಮಂಗಳೂರು : ಆರೋಪಿಗಳಿಬ್ಬರ ಜಾಮೀನು ರದ್ದತಿ ನೀಡಿ ಹೊರಡಿಸಿದ ಆದೇಶವನ್ನು ತಡೆಹಿಡಿದು ದೂರುದಾರರನ್ನು ಬಿಡುಗಡೆಗೊಳಿಸುವಂತೆ ಆದೇಶ...