ಪುತ್ತೂರು: ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಾಯ ಪ್ಲೋರಿಡಾ ಯು ಎಸ್ ಎ. ಬೆಂಗಳೂರು ಇಲ್ಲಿ ದಕ್ಷಿಣಾದೀ ಸಂಗೀತಕ್ಕೆ “ಕರ್ಣಾಕಟ ಸಂಗೀತ” ಎಂಬ ಹೆಸರು ಹೇಗೆ ಪ್ರಾಪ್ತಿಯಾಯಿತ್ತು ಎಂಬ ಬಗ್ಗೆ ಒಂದು ಅಧ್ಯಾಯನಕ್ಕೆ ಸಂಬಂಧಿಸಿದ ಸಂಶೋಧನೆಗೆ ಪುತ್ತೂರಿನ ವಿದುಷಿ ಪವಿತ್ರ ರೂಪೇಶ್ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ವಿದುಷಿ ಪವಿತ್ರ ರೂಪೇಶ್ ಅವರು ದಕ್ಷಿಣಾದಿ ಸಂಗೀತಕ್ಕೆ “ಕರ್ಣಾಕಟ ಸಂಗೀತ” ಎಂಬ ಹೆಸರು ಹೇಗೆ ಪ್ರಾಪ್ತಿಯಾಯಿತ್ತು ಎಂಬ ಬಗ್ಗೆ ಒಂದು ಅಧ್ಯಾಯನಕ್ಕೆ ಸಂಬಂಧಿಸಿ ಡಾ.ಚಂದ್ರಿಕಾ ಡಿ.ಆರ್ ಬೆಂಗಳೂರು ಮತ್ತು ವಿದುಷಿ ಎಮ್ ಎಸ್ ವಿದ್ಯಾ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದರು. ಈ ಕುರಿತು ಅವರಿಗೆ ಡಿ.೩ ರಂದು ತಿರುವನಾಮಲ್ಲೈ ಎಸ್ ಕೆ ಪಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಾಲಯಿತು. ಪವಿತ್ರ ರೂಪೇಶ್ ಅವರು ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ ರೂಪೇಶ್ ಅವರ ಪತ್ನಿ. ಹಾಗೂ ಇವರು ಸವಣೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕಿಯಾಗಿದ್ದಾರೆ.