ಮಂಗಳೂರು: ಯತೀಶ್ ಪೂಜಾರಿಯವರ ಕಥೆ, ಚಿತ್ರಕಥೆ,ಸಂಭಾಷಣೆ ಹಾಗೂ ನಿರ್ದೇಶನದ “ಲವ್ ಯು ದಿಯಾ” ಕನ್ನಡ ಮ್ಯೂಸಿಕಲ್ ವಿಡಿಯೋ ಮುಹೂರ್ತಗೊಂಡು ಈಗ ಚಿತ್ರೀಕರಣ ಮುಗಿಸಿದೆ.”ಅಸ್ತ್ರ ಪ್ರೊಡಕ್ಷನ್” ಬ್ಯಾನರ್ ನಲ್ಲಿ ತಯಾರಾದ ಆಲ್ಬಮ್ ಗೆ ಲಂಚು ಲಾಲ್ ಹಾಗೂ ಸಾನಿಕ ಪೂಜಾರಿ ನಾಯಕ ನಾಯಕಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.



ಸಾನಿಕ ಪೂಜಾರಿ ಮೂಲತಹ ಮುಂಬೈ ಅವರಾಗಿದ್ದು ಮೊದಲ ಬಾರಿಗೆ ಕನ್ನಡ ಆಲ್ಬಮ್ ನಲ್ಲಿ ನಟಿಸಿದ್ದಾರೆ, ಈ ಒಂದು ಆಲ್ಬಮ್ ವಿಡಿಯೋ ಬಹು ವೆಚ್ಚದ ರೋಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಸಾಹಸಮಯ ದೃಶ್ಯಗಳಿಂದ ಕೂಡಿದ್ದು , ಫೈಟ್ ಮಾಸ್ಟರ್ ಆಗಿ ಸುರೇಶ್ ಶೆಟ್ಟಿ ಹಾಗೂ ನವೀನ್ ಲೋಬೊ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ ಅತಿಥಿ ಪಾತ್ರದಲ್ಲಿ ಕಾಂತರ ಖ್ಯಾತಿಯ ಸ್ವರಾಜ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಶಮೀರ್ ಮುಡಿಪು ಮ್ಯೂಸಿಕ್ ಹಾಗೂ ಕಂಠ ದಾನ ಮಾಡಿರುವ ಈ ಹಾಡಿಗೆ ಯೋಗೀಶ್ AN ಸಾಹಿತ್ಯವಿದೆ.


ಪ್ರಜ್ವಲ್ ಸುವರ್ಣ ಕ್ಯಾಮರಾ ಹಾಗೂ ಎಡಿಟಿಂಗ್, ಡ್ರೋನ್ ಕ್ಯಾಮರಾ ಮನು ಸುರತ್ಕಲ್, ಮೇಕ್ಅಪ್ ಚೇತನ್ ಪೂಜಾರಿ, ಚರಣ್ ಪಚಿನಡ್ಕ, ಹೇರ್ ಸ್ಟೈಲ್ ದಿವ್ಯ, ನೃತ್ಯ ನಿರ್ದೇಶನ ಅವಿನಾಶ್ ಬಂಗೇರ, ಸ್ಟಿಲ್ ಫೋಟೋ ಮಣಿ ಶೇನೋಯ್, ಅಸಿಸ್ಟೆಂಟ್ ಕ್ಯಾಮರಾದಲ್ಲಿ ವಿಕಾಸ್ ಕುಂದರ್,ಪ್ರಜ್ವಲ್ ಗೋರೆ ಪೋಸ್ಟರ್ ಡಿಸೈನ್ ಹಾಗೂ ಚರಣ್ CRB ಪ್ರೊಡಕ್ಷನ್ ಇಂಚಾರ್ಜ್ ಆಗಿ ಕೆಲಸ ಮಾಡಿದ್ದಾರೆ.
“ಲವ್ ಯು ದಿಯಾ” ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಜನವರಿಯಲ್ಲಿ ಬಿಡುಗಡೆ ಮಾಡುದಾಗಿ ಆಲ್ಬಮ್ ತಂಡ ತಿಳಿಸಿದ್ದಾರೆ.