Home ತಾಜಾ ಸುದ್ದಿ ಮಂಗಳೂರು ಕುಕ್ಕರ್ ಸ್ಪೋಟದ ರೂವಾರಿ ಅರಾಫತ್ ಅಲಿ ಅರೆಸ್ಟ್

ಮಂಗಳೂರು ಕುಕ್ಕರ್ ಸ್ಪೋಟದ ರೂವಾರಿ ಅರಾಫತ್ ಅಲಿ ಅರೆಸ್ಟ್

0

ನವದೆಹಲಿ: ಶಿವಮೊಗ್ಗ ಮೂಲದ ಭಯೋತ್ಪಾದಕ ಸಂಚುಗಾರ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್​ಐಎ) ಪೊಲೀಸರು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮೂಲತಃ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ 2020ರ ಬಳಿಕ ತಲೆಮರೆಸಿಕೊಂಡಿದ್ದ.

ನೈರೋಬಿಯಾದಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಾಗ ಎನ್​ಐಎ ಬಲೆಗೆ ಬಿದ್ದಿದ್ದಾನೆ. ಈತ ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ, ಮಂಗಳೂರು ಕುಕ್ಕರ್ ಬಂದ್ ಸ್ಪೋಟದ , ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಪೋತ ನಡೆಸುವ ಸಲುವಾಗಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದ ಮೊಹಮ್ಮದ್ ಶಾರೀಖ್ ಜತೆಯೂ ಸಂಪರ್ಕದಲ್ಲಿದ್ದ ಎಂದು ಎನ್ ಐಎ ತಿಳಿಸಿದೆ.

2020ರಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ಅರಾಫತ್ ಅಲಿ ದೇಶ ಬಿಟ್ಟು ಹೋಗಿದ್ದನು.

LEAVE A REPLY

Please enter your comment!
Please enter your name here