ಬೆಂಗಳೂರು: ಶಬರಿಮಲೆಗೆ ತೆರಳೋ ಅಯ್ಯಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿ ವಿಶೇಷ ಕಾಳಜಿ ತೋರಿದೆ. ಅಯ್ಯಪ್ಪನ ಭಕ್ತರ ಅನುಕೂಲಕ್ಕಾಗಿ ಡಿ.1ರಿಂದ ವೋಲ್ವೋ ಬಸ್ ಸಂಚಾರ ಆರಂಭಿಸಿದೆ.



ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದ್ದು, ಬೆಂಗಳೂರು-ನೀಲಕ್ಕಲ್(ಪಂಪಾ-ಶಬರಿಮಲೈ) ಮಾರ್ಗದಲ್ಲಿ ವೋಲ್ಪೋ ವಾಹನಗಳನ್ನು ದಿನಾಂಕ 01-12-2023ರಿಂದ ಕಾರ್ಯಾಚರಣೆ ಮಾಡುತ್ತಿರೋದಾಗಿ ತಿಳಿಸಿದೆ.


ಹೀಗಿದೆ ವೇಳಾಪಟ್ಟಿ, ಪ್ರಯಾಣ ದರದ ವಿವರ
ಡಿಸೆಂಬರ್.1, 2023ರಿಂದ ಬೆಂಗಳೂರು-ನೀಲಕ್ಕಲ್ ಅಂದರೆ ಪಂಪಾ-ಶಬರಿಮಲೈ ಮಾರ್ಗವಾಗಿ ವೋಲ್ವೋ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ 1.50ಕ್ಕೆ ಹೊರಡಲಿದೆ. ನೀಲಕ್ಕಲ್ ಅನ್ನು ಸಂಜೆ 6.45ಕ್ಕೆ ತಲುಪಲಿದೆ.
ಇನ್ನೂ ನೀಲಕ್ಕಲ್ ನಿಂದ ಮಧ್ಯಾಹ್ನ 4 ಗಂಟೆಗೆ ಹೊರಟು, ಬೆಂಗಳೂರನ್ನು ರಾತ್ರಿ 10 ಗಂಟೆಗೆ ತಲುಪಲಿದೆ. ಈ ವೋಲ್ವೋ ಬಸ್ ಪ್ರಯಾಣ ದರ ರೂ.1,600 ನಿಗದಿ ಪಡಿಸಲಾಗಿದೆ.