Distribute free tickets to Indira and launch free bus travel guarantee scheme for women.
ಗಂಗಾವತಿ: ಮಹಿಳೆಯರು ಮುಖ್ಯವಾಹಿನಿಗೆ ಬರುವಂತಾಗಲು ಶೈಕ್ಷಣಿಕ ಸೇರಿ ಸ್ವಾವಲಂಬಿ ಬದುಕು ಅವಶ್ಯಕವಾಗಿದ್ದು ಇದೀಗ ರಾಜ್ಯ ಸರಕಾರ ಸಾರಿಗೆ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಸಂಚಾರದ ಅನುಕೂಲ ಕಲ್ಪಿಸಿದ್ದು ಬಹು ಉಪಯೋಗವಾಗುತ್ತದೆ ಎಂದು ತಹಸೀಲ್ದಾರ್ ಮಂಜುನಾಥ್ ಸ್ವಾಮಿ ಹಿರೇಮಠ್ ಹೇಳಿದರು.
ಅವರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ನಾರಿ ಶಕ್ತಿ ಯೋಜನೆಯ ಉಚಿತ ಬಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಇಂದಿರಮ್ಮ ಎನ್ನುವ ಮಹಿಳೆಗೆ ಕೊಪ್ಪಳಕ್ಕೆ ತೆರಳಲು ಉಚಿತ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚಾರ ಮಾಡುವ ವ್ಯವಸ್ಥೆ ಮಾಡಿದ್ದು ಇದನ್ನು ಮಹಿಳೆಯರು ಸದುಪಯೋಗ ಮಾಡಿಕೊಂಡು ಉದ್ಯೋಗ ಶಿಕ್ಷಣ ಪಡೆಯಲು ಮತ್ತು ಅಗತ್ಯವಿದ್ದರೆ ಊರುಗಳಿಗೆ ತೆರಳಲು ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಈಶಾನ್ಯ ಸಾರಿಗೆ,ವಾಯುವ್ಯಸಾರಿಗೆ ,ಬಿಎಂಟಿಸಿ ಸೇರಿದಂತೆ ಅನೇಕ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಅತ್ಯಂತ ಮಹಿಳೆಯರು ಮಾಡಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ತಮ್ಮ ಊರುಗಳಿಂದ ಉಚಿತವಾಗಿ ಬಸ್ಕಳ್ಳಿ ಸಂಚಾರ ಮಾಡಬೇಕು. ಮಹಿಳೆಯರು ಸಹ ತಮಗೆ ಬೇಕಾದಾಗ ತಮ್ಮ ಊರುಗಳಿಗೆ ಹೋಗಲು ಧಾರ್ಮಿಕ ಕೇಂದ್ರಗಳಿಗೆ ಹೋಗಲು ಇನ್ನಿತರ ಊರುಗಳಿಗೆ ಕೆಲಸ ಕಾರ್ಯಗಳಿಗೆ ಹೋಗಲು ಉಚಿತ ಬಸ್ ಸಂಚಾರವನ್ನು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ
ಈಶಾನ್ಯ ಸಾರಿಗೆ ಇಲಾಖೆ ಅಧಿಕಾರಿಗಳಾದ ಮಲ್ಲಿಕಾರ್ಜುನ ಚಳಗೇರಿ, ಚಂದ್ರಶೇಖರ್, ಎಂ ಎಸ್ ಮಳಗಿ ದುರುಗಪ್ಪ ಮೆಟ್ರಿ,ಕಾಂಗ್ರೆಸ್ ಮುಖಂಡರಾದ ಮನೋಹರ ಸ್ವಾಮಿ ಇಡ್ಲಿ ವಿಶ್ವನಾಥ್ ಗೌಡ ಮಾಲಿ ಪಾಟೀಲ್ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಡಿವೇಶ,ಈಶಾನ್ಯ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಾದ ಸೌಮ್ಯ ಅಂಬಿಕಾ ನಂದಿನಿ ಸುಮಂಗಲಮ್ಮ ವೀರಮ್ಮ ಶಾಂತಮ್ಮ ಇದ್ದರು.
ಬಾಕ್ಸ್
ಕಾಂಗ್ರೆಸ್ ಪಕ್ಷ ಚುನಾವಣೆಗು ಮುಂಚೆ ನೀಡಿದ್ದ ಬಸ್ ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡಿದ್ದು ಸಂತೋಷವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಉಳಿದ ಗ್ಯಾರಂಟಿಗಳನ್ನು ಕೂಡಲೇ ಅನುಷ್ಠಾನ ಮಾಡಲು ಈ ಮೂಲಕ ಮನವಿ ಮಾಡುತ್ತೇನೆ.
-ಇಂದಿರಮ್ಮ ಉಚಿತ ಪ್ರಯಾಣ ಮಾಡಿದ ಕೊಪ್ಪಳ ಮಹಿಳೆ.