Home ಕರಾವಳಿ ಪುತ್ತೂರು : ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ- ಪುತ್ತಿಲ ಪರಿವಾರ ಸ್ಪಷ್ಟನೆ

ಪುತ್ತೂರು : ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ- ಪುತ್ತಿಲ ಪರಿವಾರ ಸ್ಪಷ್ಟನೆ

0

ಪುತ್ತೂರು : ರಾಜಶೇಖರ್ ಕೋಟ್ಯಾನ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪುತ್ತಿಲ ಪರಿವಾರ ಸ್ಪಷ್ಟೀಕರಣ ನೀಡಿದೆ.


2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು.

ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣಾ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪ್ರತಿ… :

ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ. ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುತ್ತಿಲ ಪರಿವಾರ ತಿಳಿಸಿದೆ.

LEAVE A REPLY

Please enter your comment!
Please enter your name here